ಯುಎಇ ಅಧ್ಯಕ್ಷರಿಗೆ ಮಾತೃ ವಿಯೋಗ

Update: 2018-01-28 16:27 GMT
ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್

 ಅಬುದಾಭಿ,ಜ.28: ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ತಾಯಿ, ಶೇಖಾ ಹೆಸ್ಸಾ ಬಿಂತ್ ಮುಹಮ್ಮದ್ ಅಲ್ ನಹ್ಯಾನ್ ಅವರು ರವಿವಾರ ನಿಧನರಾಗಿದ್ದಾರೆ.

ಶೇಖಾ ಹೆಸ್ಸಾ ಬಿಂತ್ ಮುಹಮ್ಮದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಸಂಬಂಧಿಸಿ ಯುಎಇನ ಅಧ್ಯಕ್ಷೀಯ ವ್ಯಹಾರಗಳ ಸಚಿವಾಲಯವು ರವಿವಾರ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ರವಿವಾರದಿಂದ ಮೂರು ದಿನಗಳವರೆಗೆ ಶೋಕಾಚರಣೆ ನಡೆಯಲಿದೆಯೆಂದು ತಿಳಿಸಿದೆ.

ಶೇಖ್ ಹೆಸ್ಸಾ ಬಿಂತ್ ಮುಹಮ್ಮದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಯುಎಇ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News