ಕೈರೊದ ಅಮೆರಿಕನ್ ವಿವಿ ಜೊತೆ ಜಿಎಂಯು ಒಡಂಬಡಿಕೆ

Update: 2018-01-28 17:49 GMT

ಅಜ್ಮಾನ್, ಜ. 28: ಕೊಲ್ಲಿ ರಾಷ್ಟ್ರದಲ್ಲಿ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಗಲ್ಫ್ ಮೆಡಿಲ್ ಯುನಿವರ್ಸಿಟಿ (ಜಿಎಂಯು)ಯು ಈಜಿಪ್ಟ್‌ನ ಕೈರೊದಲ್ಲಿರುವ ಮಧ್ಯಪ್ರಾಚ್ಯದಲ್ಲೇ ಅತ್ಯುನ್ನತ ಆಂಗ್ಲ ಭಾಷಾ ಬೋಧಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಮೆರಿಕದಿಂದ ಪ್ರಮಾಣೀಕೃತ ಸಂಸ್ಥೆಯಾಗಿರುವ ಅಮೆರಿಕನ್ ವಿಶ್ವವಿದ್ಯಾಲಯದೊಂದಿಗೆ ತಾಂತ್ರಿಕ ಒಡಂಬಡಿಕೆಯನ್ನು ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಎರಡು ವಿಶ್ವವಿದ್ಯಾಲಯಗಳು ಜಂಟಿಯಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ. ಜೊತೆಗೆ ಸಿಬ್ಬಂದಿ ವರ್ಗವನ್ನು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಬದಲಾಯಿಸಿಕೊಳ್ಳಲಿವೆ.

ಈ ಬಗ್ಗೆ ಮಾತನಾಡಿದ ಕೈರೊ ಅಮೆರಿಕನ್ ವಿವಿಯ ಪ್ರವರ್ತಕ ಪ್ರೊ. ಎಹಾಬ್ ಅಬ್ದುಲ್ ರಹ್ಮಾನ್ ಇಬ್ರಾಹೀಂ, ಈ ಒಪ್ಪಂದವು ಎರಡು ವಿಶ್ವವಿದ್ಯಾಲಯ ಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಒಪ್ಪಂದದ ಕುರಿತು ಮಾತನಾಡಿದ ಜಿಎಂಯು ಕುಲಪತಿ ಪ್ರೊ. ಹೊಸ್ಸಮ್ ಹಮ್ದಿ, ಈ ಒಪ್ಪಂದದ ಮೂಲಕ ಜಿಎಂಯು ಮಂಡಳಿಯ ಸದಸ್ಯರ ಕನಸು ನನಸಾದಂತಾಗಿದೆ. ಜಾಗತಿಕವಾಗಿ ಖ್ಯಾತಿ ಹೊಂದಿರುವ ವಿಶ್ವವಿದ್ಯಾಲಯಗಳ ಜೊತೆಗಿನ ಸಹಯೋಗದೊಂದಿಗೆ ಜಾಗತಿಕವಾಗಿ ತಮ್ಮ ಅಸ್ತಿತ್ವವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಉಪ ಪ್ರವರ್ತಕರು ಮತ್ತು ಕಾಲೇಜ್ ಆಫ್ ಮೆಡಿಸಿನ್‌ನ ಡೀನ್ ಆಗಿರುವ ಪ್ರೊ. ಮಂದ ವೆಂಕಟರಮಣ ವಂದಿಸಿದರು. ಜಿಎಂಯುನ ಅಧೀನದಲ್ಲಿರುವ ವಿವಿಧ ಕಾಲೇಜುಗಳ ಮುಖ್ಯಸ್ಥರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News