ಸೌದಿ ಅರೇಬಿಯದಲ್ಲಿ ‘ದೊರೆ ಅಬ್ದುಲ್ ಅಝೀಝ್ ಒಂಟೆ ಉತ್ಸವ’

Update: 2018-01-29 17:44 GMT

ಜಿದ್ದಾ (ಸೌದಿ ಅರೇಬಿಯ), ಜ. 29: ಅರೇಬಿಯ ಪರ್ಯಾಯ ದ್ವೀಪದ ಜನರಿಗೆ ಒಂಟೆಗಳ ಮಹತ್ವ ಮತ್ತು ಅವುಗಳ ಪರಂಪರೆಯನ್ನು ಸಾರುವ ‘ದೊರೆ ಅಬ್ದುಲ್ ಅಝೀಝ್ ಒಂಟೆ ಉತ್ಸವ’ ಸೌದಿ ಅರೇಬಿಯದ ಸಯಾಹಾದ್‌ನಲ್ಲಿ ನಡೆಯುತ್ತಿದೆ.

70ಕ್ಕೂ ಅಧಿಕ ರಾಯಭಾರಿಗಳು, ನಿಯೋಗಗಳ ಮುಖ್ಯಸ್ಥರು ಮತ್ತು ಕಾನ್ಸುಲ್‌ಗಳನ್ನು ಒಳಗೊಂಡ ರಾಜತಾಂತ್ರಿಕ ನಿಯೋಗವೊಂದು ರವಿವಾರ ಉತ್ಸವಕ್ಕೆ ಭೇಟಿ ನೀಡಿದೆ.

ಒಂಟೆಗಳು ಮತ್ತು ಮರುಭೂಮಿಗೆ ಸಂಬಂಧಿಸಿದ ಅತ್ಯಂತ ಸುಂದರ ಮರಳು ಶಿಲ್ಪಗಳು ಮತ್ತು ಆಕೃತಿಗಳನ್ನು ನಿಯೋಗದ ಸದಸ್ಯರು ವೀಕ್ಷಿಸಿದರು.

ಸಾಂಪ್ರದಾಯಿಕ ನೃತ್ಯ ‘ಆರ್ಡಾ’ ಮತ್ತು ಇತರ ಹಲವಾರು ಸಾಂಪ್ರದಾಯಿಕ ಸೌದಿ ಕಲೆಗಳನ್ನು ರಾಜತಾಂತ್ರಿಕರಿಗೆ ಪರಿಚಯಿಸಲಾಯಿತು.

ಬಳಿಕ ಅವರು ವಿವಿಧ ಮಾದರಿಗಳ ಒಂಟೆಗಳನ್ನು ವೀಕ್ಷಿಸಿದರು. ಅತ್ಯಂತ ಉದ್ದದ, ಅತ್ಯಂತ ಗಿಡ್ಡ, ಎರಡು ಡುಬ್ಬಗಳ ಮತ್ತು ಎರಡು ಬಣ್ಣಗಳ ಒಂಟೆಗಳು ಅಲ್ಲಿದ್ದವು.

ಬೆಲ್ಜಿಯಮ್, ಚೀನಾ, ಅಫ್ಘಾನಿಸ್ತಾನ ಹಾಗೂ ಇತರ ದೇಶಗಳ ರಾಯಭಾರಿಗಳು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News