×
Ad

ರಿಟ್ಸ್ ಹೊಟೇಲ್‌ನಲ್ಲಿದ್ದ ಎಲ್ಲ ಬಂಧಿತರ ಬಿಡುಗಡೆ: ಸೌದಿ ಅಧಿಕಾರಿ

Update: 2018-01-30 23:07 IST

ರಿಯಾದ್ (ಸೌದಿ ಅರೇಬಿಯ), ಜ. 30: ರಿಯಾದ್‌ನ ಐಶಾರಾಮಿ ರಿಟ್ಸ್-ಕಾರ್ಲ್‌ಟನ್ ಹೊಟೇಲ್‌ನಲ್ಲಿ ಸೌದಿ ಅರೇಬಿಯ ಬಂಧಿಸಿಟ್ಟಿದ್ದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಸೌದಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಮೂರು ತಿಂಗಳ ಹಿಂದೆ ರಾಜಕುಮಾರರು ಮತ್ತು ಅಧಿಕಾರಿಗಳು ಸೇರಿದಂತೆ ಹತ್ತಾರು ಮಂದಿಯನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರನ್ನು ಈ ಭವ್ಯ ಹೊಟೇಲ್‌ನಲ್ಲಿ ಇಡಲಾಗಿತ್ತು.

‘‘ರಿಟ್ಸ್-ಕಾರ್ಲ್‌ಟನ್ ಹೊಟೇಲ್‌ನಲ್ಲಿ ಈಗ ಯಾರೂ ಬಂಧನದಲ್ಲಿಲ್ಲ’’ ಎಂದು ಅಧಿಕಾರಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

ದಂಡ ಪಾವತಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹೆಚ್ಚಿನ ಬಂಧಿತರು ಒಪ್ಪಿದ್ದಾರೆ ಎಂಬುದಾಗಿ ಕಳೆದ ವಾರ ಅಟಾರ್ನಿ ಜನರಲ್ ಹೇಳಿದ್ದರು. ಆಗ 90 ಮಂದಿಯ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟು ಅವರನ್ನು ಬಿಡುಗಡೆ ಮಾಡಲಾಗಿತ್ತು. 95 ಮಂದಿ ಹೊಟೇಲ್‌ನಲ್ಲೇ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News