ತುಂಬೆ ಸಮೂಹದಿಂದ ವಾರ್ಷಿಕ ಸದಸ್ಯರ ದಿನಾಚರಣೆ

Update: 2018-02-05 17:54 GMT

ದುಬೈ, ಫೆ.5: ತುಂಬೆ ಸಮೂಹ ಯುಎಇಗೆ ಸೇರಿದ ಹಾಸ್ಪಿಟಾಲಿಟಿ ವಿಭಾಗವು ನಿರ್ವಹಿಸುತ್ತಿರುವ ಪ್ರಶಸ್ತಿ ವಿಜೇತ ಹೆಲ್ತ್ ಕ್ಲಬ್‌ಗಳ ಜಾಲವಾದ ಬಾಡಿ ಆ್ಯಂಡ್ ಸೋಲ್ ಹೆಲ್ತ್ ಕ್ಲಬ್ ಆ್ಯಂಡ್ ಸ್ಪಾ, 2018ರ ಜನವರಿ 31, ರಂದು ವಾರ್ಷಿಕ ಸದಸ್ಯರ ದಿನ ಮತ್ತು ಮೆಗಾ ರಫ್‌ಲ್ ಡ್ರಾವನ್ನು ಆಯೋಜಿಸಿತು. 

ಅಜ್ಮನ್‌ನ ಅಲ್ ಜುರ್ಫ್‌ನಲ್ಲಿರುವ ಬಾಡಿ ಆ್ಯಂಡ್ ಸೋಲ್ ಹೆಲ್ತ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತರಬೇರತುದಾರರೊಂದಿಗೆ ಸಮಾಲೋಚನೆಯ ಜೊತೆಗೆ ವಿವಿಧ ಫಿಟ್ನೆಸ್ ಮಾಹಿತಿಗಳ ಹಂಚಿಕೆ ಮತ್ತು ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. 

ತುಂಬೆ ಸಮೂಹದ ಮಂಡಳಿಯ ಸದಸ್ಯರು, ನಿರ್ಮಾಣ ಮತ್ತು ನವೀಕರಣ ವಿಭಾಗದ ನಿರ್ದೇಶಕರು ಮತ್ತು ತುಂಬೆ ತಂತ್ರಜ್ಞಾನದ ನಿರ್ದೇಶಕರಾದ ಅಕ್ರಮ್ ಮೊಯ್ದಿನ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ದುಬೈಯ ಶಿಕ್ಷಣ ಸಚಿವಾಲಯದ ಕ್ರೀಡಾ ಸಮನ್ವಯಕಾರರಾದ ಮುಹಮ್ಮದ್ ಎಲ್ಮನ್‌ ಸೌರಿ ವಿಶೇಷ ಅತಿಥಿಯಾಗಿದ್ದರು.

 ತುಂಬೆ ಸಮೂಹ ಮಂಡಳಿಯ ಸದಸ್ಯರು, ತುಂಬೆ ಸಮೂಹದ ಹಾಸ್ಪಿಟಾಲಿಟಿ ವಿಭಾಗದ ನಿರ್ದೇಶಕರಾದ ಫರ್ಹಾದ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯ ನಂತರ ಬಾಡಿ ಆ್ಯಂಡ್ ಸೋಲ್ ಲಿಟ್‌ಲ್ ಕಿಡ್ಸ್ ಜಿಲ್ ಮತ್ತು ಜೂನಿಯರ್ ಹೆಲ್ತ್ ಕ್ಲಬ್‌ನ ಸದಸ್ಯರಿಂದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ನಡೆಯಿತು. ಇದಾದ ನಂತರ ಇತ್ತೀಚೆಗೆ ಆರಂಭಗೊಂಡ ಒ2 ಫಿಟ್ನೆಸ್ ರೆನ್‌ನಿಂದ ಫಿಟ್ನೆಸ್ ಆಧಾರಿತ ಕಾರ್ಯಕ್ರಮ ನಡೆಯಿತು. 

ಈ ವೇಳೆ ನಡೆದ ರಫ್‌ಲ್ ಡ್ರಾದಲ್ಲಿ ನೂತನ ಮಿತ್ಸುಬಿಷಿ ಪಜೆರೊ ವಾಹನವನ್ನು ಬಹುಮಾನವಾಗಿ ನೀಡಲಾಯಿತು. ಈ ಬಹುಮಾನವನ್ನು ಪಡೆಯಲು ವಿಜೇತರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಡ್ಡಾಯವಾಗಿತ್ತು. ಸಮೀರ್ ಬೆಲಲ್ ಅಹ್ಮದ್ ಈ ಐಷಾರಾಮಿ ವಾಹನವನ್ನು ತಮ್ಮದಾಗಿಸಿಕೊಂಡರು. 

ಮುಖ್ಯ ಅತಿಥಿಗಳು ವಾಹನದ ಕೀಯನ್ನು ವಿಜೇತರ ಕೈಗೆ ನೀಡಿದರು. ಬಾಡಿ ಆ್ಯಂಡ್ ಸೋಲ್‌ನ ಹೆಲ್ತ್ ಕ್ಲಬ್‌ಗಳು ಎಲ್ಲಾ ವಯಸ್ಸಿನ ಜನರಿಗೆ ಫಿಟ್ನೆಸ್ ಸಂಬಂಧಿ ತರಬೇತಿಯನ್ನು ನೀಡುವ ಮೂಲಕ ಯುಎಇಯಾದ್ಯಂತ ಹಾಗೂ ತಮ್ಮ ಶಾಖೆಗಳಿರುವೆಡೆಗಳಲ್ಲೆಲ್ಲಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಬಾಡಿ ಆ್ಯಂಡ್ ಸೋಲ್ ಹೆಲ್ತ್ ಕ್ಲಬ್ ಕೇವಲ ಮಹಿಳೆಯರಿಗೆ ಮಾತ್ರ ಫಿಟ್ನೆಸ್ ಕ್ಲಬ್‌ಗಳನ್ನೂ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News