ಎನಯಾ, ಡೆವ ಕಾರ್ಡ್ ಹೊಂದಿರುವವರಿಗೆ ದುಬೈಯ ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ

Update: 2018-02-05 17:57 GMT

ದುಬೈ, ಫೆ. 5: ದುಬೈ ಸರಕಾರವು ತಮ್ಮ ಉದ್ಯೋಗಿಗಳಿಗೆ ನೀಡುವ ಆರೋಗ್ಯಸೇವೆ ಕಾರ್ಡ್ ಎನಯಾ ಹಾಗೂ ದುಬೈ ವಿದ್ಯುತ್‌ಚ್ಛಕ್ತಿ ಮತ್ತು ಜಲ ಮಂಡಳಿ (ಡೆವ) ವನ್ನು ತುಂಬೆ ಸಮೂಹದ ಆರೋಗ್ಯಸೇವೆ ವಿಭಾಗವು ಸ್ವೀಕರಿಸಲು ಆರಂಭಿಸಿದ ಪರಿಣಾಮವಾಗಿ ದುಬೈ ಸರಕಾರಿ ಇಲಾಖೆಗಳಿಂದ ಬರುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಎನಯಾ ಹಾಗೂ ಡೆವ ಕಾರ್ಡ್‌ಗಳ ಸ್ವೀಕೃತಿಯ ನಂತರ, ದುಬೈ ಸರಕಾರಿ ಇಲಾಖೆಗಳಲ್ಲಿ ದುಡಿಯುವ ಉದ್ಯೋಗಿಗಳು ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ತುಂಬೆ ಆಸ್ಪತ್ರೆಯಲ್ಲಿ ಮಾಡಬಹುದಾಗಿದೆ.

ಈ ಬಗ್ಗೆ ಮಾತನಾಡಿದ ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷರಾದ ಅಕ್ಬರ್ ಮೊಯ್ದಿನ್ ತುಂಬೆ ಅವರು, ನಮ್ಮ ಸೇವೆಯನ್ನು ಎನಯಾ ಮತ್ತು ಡೆವ ಕಾರ್ಡ್ ಹೊಂದಿರುವವರಿಗೂ ವಿಸ್ತರಿಸುವ ಮೂಲ ಅವರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ನಾವು ಕಾತರರಾಗಿದ್ದೇವೆ ಎಂದು ತಿಳಿಸಿದ್ದಾರೆ.

ತುಂಬೆ ಆಸ್ಪತ್ರೆಯು ದೇಶದಲ್ಲಿರುವ ಎಲ್ಲಾ ಪ್ರಮುಖ ಇನ್ಶೂರೆನ್ಸ್ ಕಾರ್ಡ್‌ಗಳನ್ನು ಸ್ವೀಕರಿಸುತ್ತದೆ. ಈಗ ಸೇರ್ಪಡೆಗೊಂಡಿರುವ ಕಾರ್ಡ್‌ಗಳು ನಮ್ಮ ಸೇವೆಯನ್ನು ಮತ್ತಷ್ಟು ವಿಸ್ತರಣೆ ಮತ್ತು ಬಲಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News