ಹರಮೈನ್ ರೈಲು ಯೋಜನೆ: ಮಕ್ಕಾ-ಮದೀನಾ ನಡುವೆ ಗಂಟೆಗೆ 12,000 ಯಾತ್ರಿಕರ ಯಾನ

Update: 2018-02-17 17:21 GMT

ಮಕ್ಕಾ (ಸೌದಿ ಅರೇಬಿಯ), ಫೆ. 17: ಹರಮೈನ್ ರೈಲು ಯೋಜನೆ ಅಥವಾ ‘ಮಕ್ಕಾ-ಮದೀನಾ ಹೈಸ್ಪೀಡ್ ರೈಲ್ವೆ’ಯು ಸೌದಿ ಪ್ರಜೆಗಳಿಗೆ 2,000ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹರಮೈನ್ ರೈಲಿನ ಮಾಜಿ ಮಹಾ ನಿರ್ದೇಶಕ ಡಾ. ಬಸ್ಸಮ್ ಘೋಲ್ಮನ್ ಹೇಳಿದ್ದಾರೆ.

‘‘ಈ ರೈಲು ಯೋಜನೆಯ ಮೂಲಕ ಯಾತ್ರಿಕರು ಹಾಗೂ ಇತರರಿಗೆ ಸುರಕ್ಷಿತ ಹಾಗೂ ಸುಖದಾಯಕ ಪ್ರಯಾಣವನ್ನು ಕಲ್ಪಿಸಲಾಗುತ್ತದೆ. ಮಕ್ಕಾ ಮತ್ತು ಮದೀನಾ ನಡುವೆ ಗಂಟೆಗೆ 12,000 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಪ್ರತಿ ಗಂಟೆಗೆ ಮಕ್ಕಾ ಮತ್ತು ಜಿದ್ದಾ ನಡುವೆ 21 ನಿಮಿಷಗಳ 10 ಯಾನಗಳು ಹಾಗೂ ಮಕ್ಕಾ ಮತ್ತು ಮದೀನಾ ನಡುವೆ ಪ್ರತಿ ಗಂಟೆಗೆ 2 ಯಾನಗಳನ್ನು ಏರ್ಪಡಿಸಲು ಸಾಧ್ಯವಾಗುತ್ತದೆ’’ ಎಂದು ಘೋಲ್ಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News