ಕೆ.ಸಿ.ಎಫ್. ಡೇ ಆಚರಣೆ ಹಾಗೂ ರಕ್ತದಾನ ಶಿಬಿರ

Update: 2018-02-18 18:00 GMT

ರಿಯಾದ್,ಫೆ.18: ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ 5ನೇ ವರ್ಷಾಚರಣೆಯ ಪ್ರಯುಕ್ತ ಕೆ.ಸಿ.ಎಫ್ ರಿಯಾದ್ ಝೋನಲ್ ವತಿಯಿಂದ ಇತ್ತೀಚೆಗೆ ಕೆ.ಸಿ.ಎಫ್. ಡೇ ಆಚರಣೆ ಹಾಗೂ ರಕ್ತದಾನ ಶಿಬಿರ ಕೆ.ಸಿ.ಎಫ್. ಸೆಂಟರ್ ಹಾಲ್ ನಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು  ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ನಝೀರ್ ಕಾಶಿಪಟ್ನರವರು‌ ವಹಿಸಿದ್ದರು. ಓಲ್ಡ್ ಸನಯ್ಯ ಸೆಕ್ಟರ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿಯವರು ದುಆ ನೆರವೇರಿಸಿದರು. ಕೆ.ಸಿ.ಎಫ್.ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಕಾರ್ಯಕ್ರಮಕ್ಕೆ ಗಣ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಉಪಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ರವರು ಆಗಮಿಸಿದ್ದರು.
'ಕೆ.ಸಿ.ಎಫ್ ಡೇ' ಪ್ರಯುಕ್ತ ರಿಯಾದ್ ಝೋನಲ್ ಮಟ್ಟದಲ್ಲಿ  ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.  ಕೆ.ಸಿ.ಎಫ್. ಸೌದಿ ಅರೇಬಿಯಾದ್ಯಂತ ನಡೆದ  ಅಸ್ಸುಫ್ಫ ಇಸ್ಲಾಮಿಕ್ ಪರೀಕ್ಷೆಯಲ್ಲಿ  ರಿಯಾದ್ ಝೋನ್ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಅಬ್ದುಲ್ ಹಮೀದ್ ಮಂಜನಾಡಿ,  ದ್ವಿತೀಯ ರ್ಯಾಂಕ್ ಗಳಿಸಿದ ಹೈದರ್ ಮರ್ದಾಳ ಹಾಗೂ ತೃತೀಯ  ರ್ಯಾಂಕ್ ಗಳಿಸಿದ ಅಬ್ದುಲ್ ಅಝೀಝ್ ವಿಟ್ಲ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ರವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ವೇದಿಕೆಯಲ್ಲಿ ರಬುವ ಸೆಕ್ಟರ್ ಶಿಕ್ಷಣ ವಿಭಾಗದ ಚೆರ್ಮಾನ್ ಇಸ್ಮಾಯಿಲ್ ಮದನಿ ವಿಟ್ಲ   ಹಾಗೂ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗ ಚೆಯರ್ ಮೆನ್ ಅಬ್ದುಲ್ಲ ಸಖಾಫಿ ನಿಂತಿಕಲ್ಲು ರವರು ಉಪಸ್ಥಿತರಿದ್ದರು.  

ರಬುವ ಸೆಕ್ಟರ್ ಕಾರ್ಯದರ್ಶಿ ಹನೀಫ್ ಉರುವಾಲುಪದವು ರವರು  ಕೆ.ಸಿ.ಎಫ್.ಗೀತೆಯನ್ನು ಹಾಡಿದರು. .ಝೋನಲ್ ಕಾರ್ಯದರ್ಶಿ ಬಶೀರ್ ತಲಪಾಡಿ ಸ್ವಾಗತಿಸಿದರು.ಝೋನಲ್ ನಾಯಕರಾದ  ಹಂಝ ಮೈಂದಾಲ ವಂದಿಸಿದರು.

ಬತ್ತಾ ಸೆಕ್ಟರ್ ಸದಸ್ಯರಾದ ಹೈದರ್ ಮರ್ದಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News