ಕೆಸಿಎಫ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಮತ್ತು ಕಾರ್ಯಕರ್ತರ ಸಮ್ಮಿಲನ

Update: 2018-02-18 18:15 GMT

ಸೌದಿ,ಫೆ.18 ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ 'ಕೆ.ಸಿ.ಎಫ್ ಡೇ' ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವು ಸೆಕ್ಟರ್ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸಾ ಹಾಜಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆ ಝಾಹಿರ್ ನಲ್ಲಿ ಜರುಗಿತು

ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು

ರಾಜ್ಯ ಎಸ್ಸೆಸ್ಸೆಫ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮುಈಸುನ್ನ ಮೊರಲ್ ಅಕಾಡೆಮಿ ಹಾವೇರಿ ಇದರ ಜನರಲ್ ಮ್ಯಾನೇಜರ್ ಕೆ.ಎಂ ಮುಸ್ತಾಫ ಹಿಮಮಿ ಸಖಾಫಿ ಮೋಂಟುಗೋಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಕೆಸಿಎಫ್ ನಡೆಸುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ರಮವು ಶ್ಲಾಘನೀಯ ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಹಜ್ಜ್ ಸಮಿತಿ ಸದಸ್ಯರಾದ ಬಹು ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ಹೇಳಿದರು.

ಅವರು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಕೆಸಿಎಫ್ ಡೇ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ಕಾರ್ಯಕರ್ತರ ಸಮ್ಮಿಲನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇದೇ ವೇಳೆ ಕೆ. ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿಯವರನ್ನು ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಭಾರತದಿಂದ ಕರ್ಮವನ್ನು ನಿರ್ವಹಿಸಲು ಆಗಮಿಸುವ  ಹಜ್ಜಾಜಿಗಳಿಗೆ ಸ್ಪಷ್ಟವಾದ ಮಾಹಿತಿ ನೀಡಲು ಅಮೀರ್ ಇಲ್ಲದೇ ಇರುವುದು ಖೇದಕರ ವಿಷಯ, ಅಮೀರ್ ಇಲ್ಲದೇ ಅವರು ಅನುಭವಿಸುವ ಕಷ್ಟಗಳನ್ನು ನೋಡಿದವರಾಗಿದ್ದೇವೆ ನಾವು ಆದ್ದುದರಿಂದ ಮುಂದಿನ ವರ್ಷ ಹಜ್ಜ್ ಗೆ ಬರುವಂತಹ ಕನಿಷ್ಠ ಪಕ್ಷ ಕರ್ನಾಟಕದ ಹಜ್ಜಾಜಿಗಳಿಗಾದರೂ  ಅಮೀರ್ ರವರನ್ನು ಕಳುಹಿಸಿಕೂಡುವಂತೆ ರಾಜ್ಯ ಹಜ್ಜ್ ಸಮತಿಗೆ ಕರ್ನಾಟಕ ಹಜ್ಜ್ ಸದಸ್ಯರಾದ ಕೆ. ಎಂ ಸಿದ್ದೀಕ್ ರವರು ಇದರ ಬಗ್ಗೆ ದ್ವನಿ ಎತ್ತಿ ಸಂಭಂದಪಟ್ಟವರಲ್ಲಿ ಚರ್ಚಿಸಬೇಕೆಂದು ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಅಡ್ಮೀನ್ ವಿಭಾಗದ ಅಧ್ಯಕ್ಷರು ಕಲಂದರ್ ಶಾಫಿ ಅಸೈಗೋಳಿಯವರು ಭಾಷಣದ ಮೂಲಕ ಒತ್ತಾಯಿಸಿದರು.

ಉಸ್ಮಾನ್ ಸಅದಿ ನೆಲ್ಯಾಡಿ, ಝಿಯಾವುದ್ದೀನ್ ನರಿಮೊಗರು, ರಫೀಖ್ ಕೊಳಕೇರಿ, ಮುಜೀಬ್ ಹರೇಕಳ, ಪಿ.ಕೆ ಉಸ್ಮಾನ್ ಉರುವಲು ಪದವು, ಶರೀಫ್ ಕೂಳೂರು, ಹನೀಫ್ ಕೋಳಿಯೂರು, ಅಬ್ದುರ್ರಹ್ಮಾನ್ ಕರೋಪಾಡಿ, ಆಸೀಫ್ ಹೊಸ್ಮಾರ್, ಬಿಲಾಲ್ ಸಿದ್ದಕಟ್ಟೆ, ಅನ್ಸಾರ್ ಬಡಕಬೈಲ್, ಸಲಾಹುದ್ದೀನ್ ಜೋಕಟ್ಟೆ ಒಟ್ಟು 23 ಕಾರ್ಯಕರ್ತರು ಸೇರಿ ರಕ್ತದಾನ ಮಾಡಿದರು.

ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿಗಳಾದ ಡಾ.ತುರ್ಕಿ ಮುಹಮ್ಮದ್ ಮಾತಾಡಿ ರಕ್ತದಾನ ಮಾಡುವುದು ಅತೀ ಶ್ರೇಷ್ಠವಾದ ದಾನ, ನೀವು ರಕ್ತ ದಾನ ಮಾಡಿದರೆ ಒಬ್ಬರ ಜೀವ ಉಳಿಸಿದಂತೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಜಿದ್ದಾ ಝೋನ್ ಪ್ರ.ಕಾರ್ಯದರ್ಶಿ ಇಬ್ರಾಹೀಮ್ ಕಿನ್ಯ ಸ್ವಾಗತಿಸಿದರು, ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಜಿದ್ದಾ ಝೋನ್ ಸಾಂತ್ವನ ವಿಭಾಗ ಕಾರ್ಯದರ್ಶಿ ಹಾಗೂ ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್, ಸೆಕ್ಟರ್ ಸಾಂತ್ವನ ವಿಭಾಗ ಕಾರ್ಯದರ್ಶಿ ನವಾಝ್ ಇಮ್ದಾದಿ ಬಜಾಲ್, ಅಡ್ಮಿನ್ ವಿಭಾಗ ಕಾರ್ಯದರ್ಶಿ ಶಾಫಿ ಮಲ್ಲೂರು, ಕೆಸಿಎಫ್ ತ್ವಾಹಿಫ್ ಸೆಕ್ಟರ್ ಸಂಘಟನೆ ವಿಭಾಗ ಅಧ್ಯಕ್ಷರು ಖಾಲಿದ್ ಕಬಕ, ದಾರುಲ್ ಅಶ್ಅರಿಯ್ ಸುರಿಬೈಲ್ ಇದರ ಆರ್ಗನೈಝರ್ ಅಬ್ದುಲ್ ಅಝೀಝ್ ಹನೀಫಿ ಕಾಯಾರ್, ಕೆಸಿಎಫ್ ಝಾಹಿದಿ ಯುನಿಟ್ ಅಧ್ಯಕ್ಷರು ಬಶೀರ್ ಕೆಜೆಕಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News