×
Ad

ಸೌದಿ: ವೇಗ ಮಿತಿ ಗಂಟೆಗೆ 140ಕಿ.ಮೀ.ಗೆ ಏರಿಕೆ

Update: 2018-02-19 22:57 IST

ರಿಯಾದ್, ಫೆ. 19: ಸೌದಿ ಅರೇಬಿಯದ ಕೆಲವು ಮಾರ್ಗಗಳಲ್ಲಿ ನೂತನ ವೇಗ ಮಿತಿಗಳನ್ನು ಸೋಮವಾರದಿಂದ ಜಾರಿಗೆ ತರಲಾಗಿದೆ.

ವೇಗ ಮಿತಿಯನ್ನು ಕಾರುಗಳಿಗೆ ಗಂಟೆಗೆ 140 ಕಿ.ಮೀ., ಬಸ್‌ಗಳಿಗೆ ಗಂಟೆಗೆ 100 ಕಿ.ಮೀ. ಮತ್ತು ಟ್ರಕ್‌ಗಳಿಗೆ ಗಂಟೆಗೆ 80 ಕಿ.ಮೀ.ಗೆ ಹೆಚ್ಚಿಸಲಾಗಿದೆ ಎಂದು ಸಾರ್ವಜನಿಕ ಸಂಬಂಧಗಳು ಮತ್ತು ಭದ್ರತೆ ನಿರ್ದೇಶಕ ಕರ್ನಲ್ ಸಮಿ ಬಿನ್ ಮುಹಮ್ಮದ್ ಅಲ್ ಶುವೇರೀಖ್ ಸೌದಿ ಪ್ರೆಸ್ ಏಜನ್ಸಿಗೆ ತಿಳಿಸಿದರು.

ವೇಗ ಹೆಚ್ಚಿಸಲಾಗಿರುವ ರಸ್ತೆಗಳಲ್ಲಿ ನೂತನ ಫಲಕಗಳನ್ನು ಅಳವಡಿಸಲಾಗುವುದು ಹಾಗೂ ವೇಗ ಮಿತಿಯನ್ನು ಮೀರದಂತೆ ಚಾಲಕರಿಗೆ ಎಚ್ಚರಿಸಲಾಗಿದೆ.

ವೇಗ ಮಿತಿ ಬದಲಾವಣೆಯಾಗಿರುವ ರಸ್ತೆಗಳಲ್ಲಿ ರಿಯಾದ್-ಅಲ್ ಟೈಫ್ ರಸ್ತೆ, ರಿಯಾದ್-ಅಲ್-ಖಾಸಿಮ್ ರಸ್ತೆ ಮತ್ತು ರಿಯಾದ್-ಮಕ್ಕಾ ಹೆದ್ದಾರಿ ಸೇರಿವೆ.

ಆದಾಗ್ಯೂ, ಹೊಸ ವೇಗ ಮಿತಿ ಜಾರಿಯಾದ ಬಳಿಕ ವಾಹನಿಗರು ಗರಿಷ್ಠ ಅನುಮೋದಿತ ವೇಗದಲ್ಲೇ ಚಲಾಯಿಸಬೇಕೆಂದೇನೂ ಇಲ್ಲ ಎಂದು ವಿಶೇಷ ರಸ್ತೆ ಸುರಕ್ಷತಾ ಪಡೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News