ದ್ವಿಪಕ್ಷೀಯ ವ್ಯಾಪಾರ ಸಂಬಂಧ ವೃದ್ಧಿ: ಭಾರತ, ಸೌದಿ ಅರೇಬಿಯ ಪಣ

Update: 2018-02-19 17:45 GMT

ರಿಯಾದ್ (ಸೌದಿ ಅರೇಬಿಯ), ಫೆ. 19: ದ್ವಿಪಕ್ಷೀಯ ಆರ್ಥಿಕ, ಹೂಡಿಕೆ ಮತ್ತು ವ್ಯಾಪಾರ ಸಹಕಾರವನ್ನು ವೃದ್ಧಿಸಲು ಭಾರತ ಮತ್ತು ಸೌದಿ ಅರೇಬಿಯಗಳು ನಿರ್ಧರಿಸಿವೆ. ಇಲ್ಲಿನ ಅಲ್-ಯಮಮಾ ಅರಮನೆಯಲ್ಲಿ ಸೌದಿ ದೊರೆ ಸಲ್ಮಾನ್ ಮತ್ತು ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ರವಿವಾರ ನಡೆಸಿದ ಮಾತುಕತೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

‘‘ದ್ವಿಪಕ್ಷೀಯ ಸಂಬಂಧಗಳು ಮತ್ತು ಅದನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸುವ ವಿಧಾನಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು’’ ಎಂದು ಸೌದಿ ಪ್ರೆಸ್ ಏಜನ್ಸಿಯ ವರದಿಯೊಂದು ತಿಳಿಸಿದೆ.

ಕೌನ್ಸಿಲ್ ಆಫ್ ಸೌದಿ ಚೇಂಬರ್ (ಸಿಎಸ್‌ಸಿ)ನಲ್ಲಿ ನಡೆದ ಉನ್ನತ ಸ್ತರದ ಸೌದಿ ಉದ್ಯಮಿಗಳ ಬೃಹತ್ ಸಭೆಯಲ್ಲೂ ಜೇಟ್ಲಿ ಭಾಗವಹಿಸಿದರು.

ಸೌದಿ ಅರೇಬಿಯವು ಭಾರತದ ಅತಿ ದೊಡ್ಡ ಇಂಧನ ಪೂರೈಕೆ ದೇಶವಾಗಿದೆ ಹಾಗೂ ಭಾರತದ ನಾಲ್ಕನೇ ಅತಿ ದೊಡ್ಡ ವ್ಯಾಪಾರ ಭಾಗೀದಾರ ದೇಶವೂ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News