ಯಮನ್ ನಿರಾಶ್ರಿತರ ನೆರವಿಗೆ ಕೆಎಸ್‌ ರಿಲೀಫ್ ಒಪ್ಪಂದ

Update: 2018-02-21 17:41 GMT

ರಿಯಾದ್ (ಸೌದಿ ಅರೇಬಿಯ), ಫೆ. 21: ಯಮನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಗಾಯಗೊಂಡಿರುವ ಹಾಗೂ ನಿರಾಶ್ರಿತರಾಗಿರುವ ನಾಗರಿಕರಿಗೆ ನೆರವು ನೀಡಲು ಕಿಂಗ್ ಸಲ್ಮಾನ್ ಹ್ಯುಮೇನಿಟೇರಿಯನ್ ಏಡ್ ಆ್ಯಂಡ್ ರಿಲೀಫ್ ಸೆಂಟರ್ (ಕೆಎಸ್‌ರಿಲೀಫ್) ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಮಂಗಳವಾರ ವಿವಿಧ ಸಂಘಟನೆಗಳೊಂದಿಗೆ 3 ಮಿಲಿಯ ಡಾಲರ್ (ಸುಮಾರು 19.45 ಕೋಟಿ ರೂಪಾಯಿ) ಮೌಲ್ಯದ 6 ಒಪ್ಪಂದಗಳಿಗೆ ಸಹಿ ಹಾಕಿತು.

ಕೆಎಸ್‌ರಿಲೀಫ್‌ನ ಸುಪರ್‌ವೈಸರ್ ಜನರಲ್ ಹಾಗೂ ರಾಜ ಆಸ್ಥಾನದ ಸಲಹೆಗಾರ ಡಾ. ಅಬ್ದುಲ್ಲಾ ಅಲ್-ರಬೀಆ ಒಪ್ಪಂದಗಳಿಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಯಮನ್‌ಗೆ ಸೌದಿ ಅರೇಬಿಯದ ರಾಯಭಾರಿ ಮುಹಮ್ಮದ್ ಅಲ್-ಜಾಬಿರ್ ಉಪಸ್ಥಿತರಿದ್ದರು.

ಬಂಡುಕೋರರ ದೌರ್ಜನ್ಯಗಳಿಂದ ಸಂತ್ರಸ್ತರಾದ ಯಮನಿಗಳಿಗೆ ನೆರವು ನೀಡುವುದಕ್ಕಾಗಿ ರೂಪಿಸಲಾಗಿರುವ ಆರು ಯೋಜನೆಗಳು ಇದಾಗಿವೆ ಎಂದು ಡಾ. ಅಲ್-ರಬೀಆ ‘ಅರಬ್ ನ್ಯೂಸ್’ಗೆ ತಿಳಿಸಿದರು.

ಯಮನ್‌ನಲ್ಲಿ ಗಾಯಗೊಂಡ ನಾಗರಿಕರ ಸಂಖ್ಯೆ 4,423ಕ್ಕೆ ಏರಿದೆ. ಆ ಪೈಕಿ 800 ಮಂದಿಗೆ ಸದ್ಯ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News