ದಮ್ಮಾಮ್: ಫೆ.24ರಂದು ಆರತಿ ಕೃಷ್ಣರಿಂದ ಅನಿವಾಸಿಗರ ಭೇಟಿ, ಸನ್ಮಾನ ಕಾರ್ಯಕ್ರಮ

Update: 2018-02-23 10:19 GMT

ದಮ್ಮಾಮ್, ಫೆ. 23: ಕರ್ನಾಟಕ ಸರಕಾರದ ಅಧೀನದಲ್ಲಿರುವ ಕರ್ನಾಟಕ ಅನಿವಾಸಿ ಫೋರಂ (ಕೆಎನ್ಆರ್ ಐ ಫೋರಂ) ನ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಸೌದಿ ಅರೇಬಿಯಾ ಪ್ರವಾಸದಲ್ಲಿದ್ದು, ಫೆ. 24ರಂದು ದಮ್ಮಾಮ್ ಗೆ ಭೇಟಿ ನೀಡಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಅಲ್ ಖೋಬಾರ್ ನ ಹೊಲಿಡೇ ಇನ್ ಹೋಟೆಲ್ ನಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಪ್ರಸಕ್ತ ಸನ್ನಿವೇಶದ ಬಗ್ಗೆ ಚರ್ಚಿಸಿ, ಅನಿವಾಸಿ ಕನ್ನಡಿಗರಿಗಾಗಿ ಕರ್ನಾಟಕ ಸರಕಾರ ಜಾರಿಗೊಳಿಸಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಕರ್ನಾಟಕ ಅನಿವಾಸಿ ಫೋರಂ ಪೂರ್ವ ವಲಯದ ಅಧ್ಯಕ್ಷ ಝಕರಿಯಾ ಮುಝೈನ್ ಅವರು ತಿಳಿಸಿದ್ದಾರೆ.

ಉದ್ಯಮಿಗಳಿಗೆ ಅವರ ಉದ್ಯಮ ಸಾಮಾನ್ಯರಿಗೆ ಉಪಕರಿಸುವ ರೀತಿಯಾಗಿ ಕರ್ನಾಟಕದಲ್ಲಿ ವಿಸ್ತರಿಸಬಹದು ಎಂಬುದರ ಬಗ್ಗೆ  ಸಮಾಲೋಚನೆ, ಸೌದಿಯ ಪ್ರಸಕ್ತ ಸನ್ನಿವೇಶದಲ್ಲಿ ಸಂಕಷ್ಟಕ್ಕೀಡಾಗಿರುವ ದುಡಿಯುವ ವರ್ಗಕ್ಕೂ ಬೇಕಾಗಿರುವ ಪರ್ಯಾಯ ವ್ಯವಸ್ಥೆಯನ್ನು ನೇರವಾಗಿ  ಚರ್ಚಿಸುವ ಮತ್ತು ಸರಕಾರದ ಗಮನಕ್ಕೆ ತರುವ ಸದವಕಾಶ ಕೂಡ ಆಗಿದೆ ಎಂದು ಅವರು ತಿಳಿಸಿದರು.

ಈ ಸಮಾರಂಭಕ್ಕೆ ರಾಜ್ಯ, ಜಿಲ್ಲಾ ಮಟ್ಟದ ಹಾಗೂ ಮೊಹಲ್ಲಾ ಮಟ್ಟದ ಎಲ್ಲ ಸಂಘಸಂಸ್ಥೆಗಳ ಪ್ರತಿನಿಧಿಗಳಿಗೆ, ಸಾಮಾಜಿಕ ಕಾರ್ಯಕರ್ತರಿಗೆ, ಬುದ್ಧಿಜೀವಿಗಳಿಗೆ ಹಾಗೂ  ಉದ್ಯಮಿಗಳಿಗೆ ಆಮಂತ್ರಣ ನೀಡಿದ್ದು, ಎಲ್ಲರ ಸಹಕಾರ ನಿರೀಕ್ಷಿಸಲಾಗಿದೆ ಎಂದು ಝಕರಿಯಾ ಮುಝೈನ್ ಹಾಗೂ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆರತಿ ಕೃಷ್ಣ ಅವರು ದಮ್ಮಾಮ್ ನಲ್ಲಿ ಮಾತ್ರವಲ್ಲದೆ, ರಿಯಾದ್ ಹಾಗೂ ಜಿದ್ದಾದಲ್ಲೂ ಅನಿವಾಸಿ ಕನ್ನಡಿಗರನ್ನು ಭೇಟಿಯಾಗುವ ಕಾರ್ಯಕ್ರಮವಿದೆ ಎಂದೂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News