ದೋಹಾದಲ್ಲಿ ಕೆಎಂಸಿಎಯಿಂದ ಸತತ ಎಂಟನೇ ರಕ್ತದಾನ ಶಿಬಿರ
ದೋಹಾ,ಫೆ.26: ಭಾರತೀಯ ರಾಯಭಾರಿ ಕಚೇರಿಯ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ಇಂಡಿಯನ್ ಕಲ್ಚರಲ್ ಸೆಂಟರ್(ಐಸಿಸಿ)ನೊಂದಿಗೆ ಸಂಲಗ್ನಗೊಂಡಿರುವ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್(ಕೆಎಂಸಿಎ) ಇತ್ತೀಚಿಗೆ ಇಲ್ಲಿಯ ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ಬ್ಲಡ್ ಡೋನರ್ ಸೆಂಟರ್‌ನಲ್ಲಿ ತನ್ನ ಸತತ ಎಂಟನೇ ವರ್ಷದ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿತು. ಈ ಶಿಬಿರದಲ್ಲಿ 40 ರಕ್ತದಾನಿಗಳು ಭಾಗಿಯಾಗಿದ್ದರು.
ಐಸಿಸಿ ಅಧ್ಯಕ್ಷ ಮಿಲನ್ ಅರುಣ್ ಅವರು ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಮೊಹಮ್ಮದ್ ನಬಿ, ಐಸಿಸಿ ಜೊತೆ ಸಂಯೋಜಿತ ಸಂಸ್ಥೆಗಳ ಸದಸ್ಯರು ಮತ್ತು ಕೆಎಂಸಿಎದ ಹಿರಿಯ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ಪಿಎಚ್‌ಸಿಯ ಡಾ.ಮುಖ್ತಾರ್ ಅವರು ಪ್ರಶ್ನೋತ್ತರಗಳ ಮೂಲಕ ರಕ್ತದಾನದ ಆರೋಗ್ಯಲಾಭಗಳ ಬಗ್ಗೆ ತಿಳುವಳಿಕೆ ನೀಡಿದರು.
ಮಿಲನ್ ಅರುಣ್ ಮತ್ತು ಮುಹಮ್ಮದ್ ನಬಿ ಅವರು ಮಾತನಾಡಿ ರಕ್ತದಾನ ಅಭಿಯಾನಕ್ಕೆ ಸ್ಪೂರ್ತಿಯನ್ನು ನೀಡಿದರು.
ಕೆಎಂಸಿಎ ಅಧ್ಯಕ್ಷ ಅಬ್ದುಲ್ಲಾ ಮೋನು ಮೊಯ್ದಿನ್ ಮತ್ತು ಉಪಾಧ್ಯಕ್ಷರಾದ ಆಯಿಷಾ ರಫೀಕ್ ಅವರು ಸ್ವಾಗತಿಸಿದರು. ಅಹ್ಮದ್ ಸಯೀದ್ ಅಸ್ಸಾದಿ ಮತ್ತು ಫಯಾಜ್ ಅಹ್ಮದ್ ಅವರು ವಂದಿಸಿದರು. ಇಸ್ಮಾಯಿಲ್ ಅಬೂಬಕರ್, ಝಾಕಿರ್ ಅಹ್‌ಮದ್ ಮತ್ತು ನಿಝಾನ್ ಅಬ್ದುಲ್ಲಾ ಅವರನ್ನೊಳಗೊಂಡ ಕೆಎಂಸಿಎ ಲಾಜಿಸ್ಟಿಕ್ಸ್ ತಂಡವು ರಕ್ತದಾನ ಅಭಿಯಾನಕ್ಕೆ ನೆರವುಗಳನ್ನು ಒದಗಿಸಿತ್ತು.
ಅಸ್ಮತ್ ಅಲಿ,ಪ್ರಕಾಶ ನೊರೊನಾ,ಸೀತಾರಾಮ ಶೆಟ್ಟಿ,ನವನೀತ ಶೆಟ್ಟಿ,ರಾಮಚಂದ್ರ ಶೆಟ್ಟಿ, ಇಕ್ಬಾಲ್ ಮನ್ನಾ, ದಿವಾಕರ ಪೂಜಾರಿ, ಇಬ್ರಾಹಿಂ ಬ್ಯಾರಿ, ಶರೀಫ್, ಇಲ್ಯಾಝ್, ಸುಹೈಬ್ ಅಹ್ಮದ್, ದಿನೇಶ ಗೌಡ, ಅನಿಲ ಬೋಳೂರ, ಮುರಳೀಧರ, ತುಫೈಲ್ ಮಥೀನ್, ಕಿರಣ್, ಸಂಜಯ ಕುರ್ಡಿ, ಮುಹಮ್ಮದ್ ಶಮೀಮ್, ಕಾಸಿಂ, ಫಾತಿಮಾ ನಾಝಿಯಾ ಸೇರಿದಂತೆ ಐಸಿಸಿ ಸಂಯೋಜಿತ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸದಸ್ಯರು ಉಪಸ್ಥಿತರಿದ್ದರು.