ಸೌದಿಯಲ್ಲಿ ಮರಳು ಬಿರುಗಾಳಿ; ಶಾಲೆಗಳು ಬಂದ್
Update: 2018-02-26 22:29 IST
ರಿಯಾದ್, ಫೆ. 26: ಮರಳು ಬಿರುಗಾಳಿಯ ಹಿನ್ನೆಲೆಯಲ್ಲಿ ಬಿಶ ಮತ್ತು ಟತ್‌ಲಿತ್ ರಾಜ್ಯಗಳ ಎಲ್ಲ ಶಾಲೆಗಳನ್ನು ಸೋಮವಾರ ಮುಚ್ಚಲಾಗಿದೆ ಎಂದು ಅಸಿರ್ ವಲಯದ ಶಿಕ್ಷಣ ಅಧಿಕಾರಿಗಳು ಹೇಳಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಶ ಶಿಕ್ಷಣ ಪ್ರಾಧಿಕಾರದ ವಕ್ತಾರ ನಜಿ ಅಲ್ ಸುಬೈ ತಿಳಿಸಿದರು.
ಆದಾಗ್ಯೂ, ಬಲ್‌ಕ್ರಾನ್ ಮತ್ತು ದಕ್ಷಿಣ ಖೈಬರ್ ಪ್ರಾಂತಗಳ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಆದಾಗ್ಯೂ, ಇದೇ ಪ್ರಾಂತಗಳಲ್ಲಿ ಬರುವ ನಜ್ರನ್ ವಿಶ್ವವಿದ್ಯಾಲಯ ಮತ್ತು ಶರುರಾ, ಯಡಮಾ ಮತ್ತು ಹುಬುನಗಳಲ್ಲಿರುವ ಅದರ ಕ್ಯಾಂಪಸ್‌ಗಳು ಸೋಮವಾರ ಮುಚ್ಚಿದ್ದವು.