ಯಮನ್: ಸೌದಿ ದಾಳಿಯಲ್ಲಿ 9 ನಾಗರಿಕರು ಹತ

Update: 2018-03-01 17:33 GMT

  ದುಬೈ, ಮಾ. 1: ಯಮನ್‌ನಲ್ಲಿ ಹೌದಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ಬುಧವಾರ ನಡೆಸಿದ ಎರಡು ದಾಳಿಗಳಲ್ಲಿ 9 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 6 ನಾಗರಿಕರು ಗಾಯಗೊಂಡಿದ್ದಾರೆ.

ಯಮನ್ ಅಧ್ಯಕ್ಷ ಅಬು-ರಬ್ಬು ಮನ್ಸೂರ್ ಹಾದಿಯ ಅಧಿಕಾರವನ್ನು ಮರಳಿ ಗಳಿಸುವುದಕ್ಕಾಗಿ 2015ರಿಂದ ಯಮನ್ ಯುದ್ಧದಲ್ಲಿ ಮಧ್ಯ ಪ್ರವೇಶಿಸಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ನಿರಂತರವಾಗಿ ವಾಯು ದಾಳಿ ನಡೆಸುತ್ತಿವೆ. ಹಲವು ಸಂದರ್ಭಗಳಲ್ಲಿ ದಾಳಿಯಿಂದಾಗಿ ನಾಗರಿಕರು ಸಾಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News