ಯಮನ್ ಸಂತ್ರಸ್ತರಿಗೆ ಕೆಎಸ್‌ರಿಲೀಫ್ ನೆರವು

Update: 2018-03-10 16:48 GMT

ಜಿದ್ದಾ (ಸೌದಿ ಅರೇಬಿಯ), ಮಾ. 10: ಯಮನ್‌ನಲ್ಲಿ ಹೌದಿ ಬಂಡುಕೋರರಿಂದ ಮುತ್ತಿಗೆಗೊಳಗಾಗಿರುವ ನಾಗರಿಕರಿಗೆ ‘ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ’ (ಕೆಎಸ್‌ರಿಲೀಫ್) ಗುರುವಾರ ನೆರವು ವಿತರಿಸಿದೆ.

ಯಮನ್ ಸಮಗ್ರ ಮಾನವೀಯ ಕಾರ್ಯಾಚರಣೆಯ ಭಾಗವಾಗಿರುವ ಈ ನೆರವಿನಲ್ಲಿ ಆಶ್ರಯ ಮತ್ತು ಖರ್ಜೂರದ 300 ಪೊಟ್ಟಣಗಳನ್ನು ಒದಗಿಸಲಾಗುತ್ತದೆ. ಮರಿಬ್ ರಾಜ್ಯದ 1,000 ಜನರಿಗೆ ಈ ನೆರವನ್ನು ನೀಡಲಾಗಿದೆ.

ಹದ್ರಾಮಾತ್‌ನ ಮುಕಲ್ಲ ವಲಯದಲ್ಲಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಅರ್ಹ ಕುಟುಂಬಗಳಿಗೆ ಆಹಾರ ಚೀಲಗಳನ್ನು ನೀಡುವ ಮೂಲಕ ಕೆಎಸ್‌ರಿಲೀಫ್ ಡೆಂಗ್ ವಿರುದ್ಧದ ಹೋರಾಟದಲ್ಲಿ ತೊಡಗಿದೆ. ಇಲ್ಲಿ ಡೆಂಗಿ ಪೀಡಿತ 600 ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಆಹಾರ ಪಡಿತರವನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News