ದಾರುನ್ನೂರ್ ತಾಬೂಕ್ ಘಟಕದ ಮಹಾಸಭೆ, ನೂತನ ಸಮಿತಿ ರಚನೆ

Update: 2018-03-12 17:44 GMT

ತಾಬೂಕ್, ಮಾ. 12 : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ತಾಬೂಕ್ ಘಟಕದ 3 ನೇ ವಾರ್ಷಿಕ ಮಹಾ ಸಭೆಯು ವಲಚ್ಚಿಲ್ ಬ್ರದರ್ಸ್ ರೂಮ್ ನಲ್ಲಿ  ಶೇಕ್ ಅಬ್ದುಲ್ ರಹ್ಮಾನ್ ಅಡ್ಡೂರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ನೂರುಲ್ ಹುದಾ ಮದ್ರಸ ತಾಬೂಕ್  ಅಧ್ಯಾಪಕರಾದ ಶಿಹಾಬುದ್ದೀನ್ ಫೈಝಿ ದುಆ ದೊಂದಿಗೆ ಆರಂಭಿಸಿದರು. ರಮಳಾನ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಶೇಕ್ ಮಹಮ್ಮದ್ ರೈಹಾನ್   ಕಿರಾಅತ್ ಪಠಿಸಿದರು. ಮುಖ್ಯ ಅತಿಥಿಗಳಾಗಿ ದಾರುನ್ನೂರ್ ತಾಬೂಕ್ ಗೌರವಾಧ್ಯಕ್ಷರು ಉಮರ್ ವಲಚ್ಚಿಲ್ , ಐ ಯಫ್ ಯಫ್ ತಾಬೂಕ್ ಅಧ್ಯಕ್ಷ ಅಬ್ದುಲ್ ಮಜೀದ್ ವಿಟ್ಲ , ಅಬ್ದುಲ್ ಲತೀಫ್ ಉಪ್ಪಿನಂಗಡಿ,   ಹಕೀಮ್ ದಾರಿಮಿ ಹಾಗು ಇತರರು ಉಪಸ್ಥಿತರಿದ್ದರು.

ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 

ಗೌರವಾಧ್ಯಕ್ಷರಾಗಿ ಸಲೀಂ ಮಹಮ್ಮದ್ ಕಡಂಬು, ಅಧ್ಯಕ್ಷರಾಗಿ ಮುಸ್ತಫಾ ಪೆರಾಡಿ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಕೀಂ ದಾರಿಮಿ, ಹನೀಫ್ ಬಿ.ಸಿ ರೋಡ್ , ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್ ಎರ್ಮಾಡಿ ಉಪ್ಪಿನಂಗಡಿ, ಕಾರ್ಯದರ್ಶಿಗಳಾಗಿ ನವಾಝ್ ಕಲ್ಲೇರಿ,  ಜಬ್ಬಾರ್ ಬಜ್ಪೆ, ಕೋಶಾಧಿಕಾರಿಯಾಗಿ ಶೇಕ್ ಅಬ್ದುಲ್ ರಹ್ಮಾನ್ ಅಡ್ಡೂರ್,  ಕಾರ್ಯಕಾರಿ ಸಮಿತಿ ಸದಸ್ಯರಾಗಿ  20 ಮಂದಿಯನ್ನು ಆಯ್ಕೆ ಮಾಡಲಾಯಿತು.

ಮುಸ್ತಫಾ ಪೆರಾಡಿ ಅವರು ಮಾತನಾಡಿ, ದಾರುನ್ನೂರಿನ ಪ್ರಸಕ್ತ ಸನ್ನಿವೇಶವನ್ನು ವಿವರಿಸಿದರು. ದಾರುನ್ನೂರ್ ತಾಬೂಕ್ ಘಟಕವನ್ನು ಒಂದು ಆದರ್ಶ ಮತ್ತು ಉತ್ತಮ ಘಟಕವಾಗಿ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಶೀರ್ ಎರ್ಮಾಡಿ ಮಾತನಾಡಿದರು. ಮುಸ್ತಫಾ ಮುಸ್ಲಿಯಾರ್ ಪೆರಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು  ಅಬ್ದುಲ್ ಬಶೀರ್ ಎಮ್ಮಾಡಿ ಸಂಯೋಜಿಸಿ,  ಸಲೀಂ ಕಡಂಬು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News