ಜುಬೈಲ್: 'ಜಮೀಯತುಲ್ ಫಲಾಹ್-ಎಕ್ಸ್ ಪರ್ಟೈಸ್ ಚಾಂಪಿಯನ್ಸ್ ಟ್ರೋಫಿ' ಕ್ರಿಕೆಟ್ ಪಂದ್ಯಾವಳಿ

Update: 2018-03-16 07:00 GMT

ಜುಬೈಲ್, ಮಾ.16: ಜಮೀಯತುಲ್ ಫಲಾಹ್ ಜುಬೈಲ್ ಘಟಕವು ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿಯ ಸಹಯೋಗದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಇತ್ತೀಚೆಗೆ ಜುಬೈಲ್ ನಲ್ಲಿ 'ಜಮೀಯತುಲ್ ಫಲಾಹ್-ಎಕ್ಸ್ ಪರ್ಟೈಸ್ ಚಾಂಪಿಯನ್ಸ್ ಟ್ರೋಫಿ-2018' ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿತ್ತು.

12 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿ ಎರಡು ದಿನಗಳ ಕಾಲ ನಡೆದವು. ಸಾಮ್ಕೋನ್ ತಂಡ ಚೊಚ್ಚಲ ಮೊದಲ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಕ್ಸ್ ಪರ್ಟೈಸ್ ತಂಡ, ಆರು ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 61 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಸಾಮ್ಕೋನ್ ತಂಡ ಎರಡೇ ವಿಕೆಟ್ ಗಳನ್ನು ಕಳೆದುಕೊಂಡು ವಿಜಯಿಯಾಯಿತು. ಎಕ್ಸ್ ಪರ್ಟೈಸ್ ತಂಡ ರನ್ನರ್ಸ್ ಅಪ್ ಟ್ರೋಫಿಯನ್ನು ಗಳಿಸಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸಾಹಿಲ್ ಕಾರ್ಕಳ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಉತ್ತಮ ಬೌಲರ್ ಆಗಿ ಸಾಮ್ಕೋನ್ ನ ಶಫೀಕ್ ಆಯ್ಕೆಯಾದರು. ಎಕ್ಸ್ ಪರ್ಟೈಸ್ ನ ಫವಾಝ್ ಉತ್ತಮ ಬ್ಯಾಟ್ಸ್ ಮೆನ್ ಆಗಿ ಮೂಡಿಬಂದರು. ಅತ್ಯುತ್ತಮ ಕೀಪರ್ ಹಿರಿಮೆಗೆ ಸಾಹಿಲ್ ಕಾರ್ಕಳ ಪಾತ್ರರಾದರು. 

ಇದಕ್ಕೂ ಮೊದಲು ಪ್ರಥಮ ಸೆಮಿಫೈನಲ್ ಪಂದ್ಯವು ಸಾಸ್ಪ್ ಮತ್ತು ಸಾಮ್ಕೋನ್ ನಡುವೆ ಜರುಗಿತು. ಸಾಸ್ಪ್ ಆರು ಓವರ್ ಗಳಲ್ಲಿ 44 ರನ್ ಗಳಿಸಿದರೆ, ಸಾಹಿಲ್ ಕಾರ್ಕಳರ ಆಕ್ರಮಣಕಾರಿ ಆಟದ ಮೂಲಕ ನಾಲ್ಕೇ ಓವರ್ ಗಳಲ್ಲಿ ಪಂದ್ಯದ ಮೊತ್ತವನ್ನು ಬೆನ್ನಟ್ಟಿದ ಸಾಮ್ಕೋನ್ ಫೈನಲ್ ಗೆ ಲಗ್ಗೆಯಿಟ್ಟಿತು. 

ಎರಡನೇ ಸೆಮಿಫೈನಲ್ ಎಕ್ಸ್ ಪರ್ಟೈಸ್ ಮತ್ತು ಎಸ್.ಆರ್. ಇಂಜಿನಿಯರಿಂಗ್ ನಡುವೆ ನಡೆಯಿತು. ಎಸ್.ಆರ್. ತಂಡ ಆರು ಓವರ್ ಗಳಲ್ಲಿ 33 ರನ್ ಕಲೆ ಹಾಕಿತ್ತು. ಸುಲಭದ ಗುರಿಯನ್ನು ಬೆನ್ನಟ್ಟಿದ ಎಕ್ಸ್ ಪರ್ಟೈಸ್ ಕೇವಲ ನಾಲ್ಕೇ ಓವರ್ ಗಳಲ್ಲಿ ಜಯ ಗಳಸಿ ಫೈನಲ್ ಗೆ ಪ್ರವೇಶ ಪಡೆಯಿತು.

ಪಂದ್ಯಾವಳಿಯ ಸಮಾರೋಪ ಸಮಾರಂಭವು ಸಿಯಾಫ್ ಸಲೀಂರ ಕಿರಾತ್ ನೊಂದಿಗೆ ಆರಂಭವಾಯಿತು. ಬಳಿಕ “ಪ್ರಗತಿ” ಎನ್ನುವ ಜಮೀಯತುಲ್ ಫಲಾಹ್ ನ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲುವ ವೀಡಿಯೋ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮ ನಿರ್ವಹಿಸಿದ ಮುಹಮ್ಮದ್ ಝಾಯಿದ್ ನಾಸಿರ್ ಶೇಖ್ ಅವರು ಜಮೀಯತುಲ್ ಫಲಾಹ್ ನ ಶೈಕ್ಷಣಿಕ ಯಶೋಗಾಥೆಯನ್ನು ಮುಂದಿಟ್ಟರು. ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಕಿಡ್ನಿ ಡಯಾಲಿಸಿಸ್ ಯಂತ್ರಗಳ ಮೂಲಕ ಸಲ್ಲಿಸುತ್ತಿರುವ ಸಮಾಜ ಸೇವೆ ಹಾಗೂ 30 ವರ್ಷಗಳ ಕಾಲ ಸಂಸ್ಥಸ ನಡೆಸಿದ ಹಲವು ಮೈಲಿಗಲ್ಲುಗಳನ್ನ ಸಭೆಯ ಮುಂದಿಟ್ಟರು.

ಇದೇ ಸಂದರ್ಭದಲ್ಲಿ ಕರಾವಳಿಯ ಪ್ರತಿಷ್ಠಿತ ಕಂಪೆನಿ ಎಕ್ಸ್ ಪರ್ಟೈಸ್ ನ ಕುರಿತಾದ ವೀಡಿಯೋವೊಂದನ್ನು ಪ್ರದರ್ಶಿಸಲಾಯಿತು.

ಪಂದ್ಯಾವಳಿಯ ಮುಖ್ಯ ಪ್ರಾಯೋಜಕರಾದ ಎಕ್ಸ್ ಪರ್ಟೈಸ್ ಕಂಪೆನಿಯ ಮಾಲಕ ಕೆ.ಎಸ್.ಶೈಖ್ ಅವರನ್ನು ಸನ್ಮಾನಿಸಲಾಯಿತು. ಜಮೀಯತುಲ್ ಫಲಾಹ್ ಜುಬೈಲ್ ಘಟಕದ ಅಧ್ಯಕ್ಷ ನಾಸಿರ್ ಶೈಖ್ ಮಾತನಾಡಿ, ಪಂದ್ಯಾವಳಿಗೆ ಪ್ರೋತ್ಸಾಹ ನೀಡಿದ ಎಲ್ಲಾ ಕ್ರೀಡಾಭಿಮಾನಿಗಳಿಗೂ, ಪ್ರಾಯೋಜಕ ಕಂಪೆನಿಗಳಿಗೂ, ತಂಡಗಳಿಗೂ ಕೃತಜ್ಞತೆ ಸಲ್ಲಿಸಿದರು.  

ವೇದಿಕೆಯಲ್ಲಿ ಎನ್.ಆರ್.ಐ. ಫೋರಂ ಪೂರ್ವ ವಲಯದ ಅಧ್ಯಕ್ಷ, ಅಲ್ ಮುಝೈನ್ ಸಂಸ್ಥೆಯ ಝಕರಿಯಾ ಜೋಕಟ್ಟೆ, ಎನ್.ಆರ್.ಐ. ಫೋರಂ ಪೂರ್ವ ವಲಯದ ಖಜಾಂಚಿ, ಎಕ್ಸ್ ಪರ್ಟೈಸ್ ನ ಕೆ.ಎಸ್.ಶೈಖ್, ಎಸ್.ಆರ್ ಇಂಜಿನಿಯರಿಂಗ್ ನ ಮುನವ್ವರ್ ಬೈರಿಕಟ್ಟೆ, ಕೊನೈನಿ ಮೆಡಿಕಲ್ ಸೆಂಟರ್ ನ ಮಾರ್ಕೆಟಿಂಗ್ ಮೆನೇಜರ್ ಅನೀಸ್ ಅಹ್ಮದ್, ಅಲ್ ಶಿಫಾ ಆಸ್ಪತ್ರೆಯ ಎಂ.ಡಿ. ಅಖ್ತರ್ ಶೈಖ್, ಸಾಂಡ್ ಟೆಕ್ ನ ಜನರಲ್ ಮ್ಯಾನೇಜರ್ ತಾಹಿರ್ ಸಾಲ್ಮರ, ಅರಬ್ ಎನರ್ಜಿಯಾದ ಫಾರೂಕ್ ಮಲ್ನಾಡ್, ಈವೆಂಟ್ ಚೇರ್ ಮ್ಯಾನ್, ಎನ್.ಆರ್.ಸಿ.ಸಿ. ಮಾಜಿ ಅಮೀರ್ ಇದರ ಮಾಜಿ ಅಮೀರ್ ಫಾರೂಕ್ ಪೋರ್ಟ್ ಫೋಲಿಯೋ, ಜುಬೈಲ್ ಘಟಕದ ಮಾಜಿ ಅಧ್ಯಕ್ಷ ಫಯಾಝ್ ಅಹ್ಮದ್, ಜುಬೈಲ್ ಘಟಕದ ಸಲಹೆಗಾರ ಅಫಾನ್ ಶೈಖ್ ಮೊದಲಾದವರು ಉಪಸ್ಥಿತರಿದ್ದರು.

ಝಿಯಾದ್ ದರ್ಬೆ, ರಫೀ ಶೇಖ್, ಅಲ್ತಾಫ್ ಸೇರಿದಂತೆ ಹಲವರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ರಾಫೆಲ್ ಡ್ರಾ ಅತ್ಯಂತ ಕುತೂಹಲ ಮೂಡಿಸಿತ್ತು. ಗ್ಲೋಬಲ್ ಟ್ರಾವೆಲ್ ಸೊಲ್ಯುಷನ್ ನ ಪ್ರತಿನಿಧಿ ಯಾಕೂಬ್ ಮುಝಮ್ಮಿಲ್ ಕಂಪೆನಿ ಪರವಾಗಿ ವಿಜೇತರಿಗೆ ವಿವಿಧ ಬಹುಮಾನಗಳನ್ನು ವಿತರಿಸಿದರು.

ಈ ಕಾರ್ಯಕ್ರಮದ ಮುಖ್ಯ ಪ್ರಾಯೋಕತ್ವವನ್ನು ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿ ವಹಿಸಿಕೊಂಡಿದ್ದರೆ, ಎಸ್.ಆರ್ ಇಂಜಿನಿಯರಿಂಗ್, ಸಾಮ್ಕೋನ್, ಅಮ್ಯಾಕೋ, ಎಸ್.ಎ. ಟೆಕ್ನಾಲಜಿ, ಸಯೀದ್ ಕಂಪ್ಯೂಟರ್ಸ್, ಟಿನೆಟ್, ಗಲ್ಫ್ ಕಾಲಮ್ ,ಅಲ್ ಮುಝೈನ್, ಫಹದ್ ಇಂಜಿನಿಯರಿಂಗ್, ಕುಕ್ಝೋನ್ ರೆಸ್ಟಾರೆಂಟ್, ಶಿಫಾ ಹಾಸ್ಪಿಟಲ್, ಎನರ್ಜಿಯಾ, ಸಾಸ್ಪ್, ಜಿಟಿಎಸ್, ಸ್ಪೆಕ್ಟ್ರಂ,ಸ್ಪಾರ್ಕ್ ಅರೇಬಿಯಾ, ಅರಬ್ ಎನರ್ಜಿಯಾ, ಎಲೈಟ್ ಇನ್ ವೆನ್ಷನ್, ದೋಸಾ ವರ್ಲ್ಡ್ ಸಹಪ್ರಾಯೋಜಕರಾಗಿ ಸಹಕರಿಸಿದವು.

ಸಿದ್ದೀಕ್ ಬೈಕಂಪಾಡಿ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News