ಶಾರ್ಜಾ: ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್!

Update: 2018-03-16 16:58 GMT

  ಶಾರ್ಜಾ, ಮಾ. 16: ಶಾರ್ಜಾದ ಶುಲ್ಕ ಪಾವತಿ ವಾಹನ ನಿಲುಗಡೆ ಪ್ರದೇಶಗಳಲ್ಲಿ ಶುಕ್ರವಾರಗಳು ಮತ್ತು ಸಾರ್ವಜನಿಕ ರಜಾ ದಿನಗಳಂದು ವಾಹನಗಳ ನಿಲುಗಡೆ ಮಾರ್ಚ್ 30ರ ಬಳಿಕ ಉಚಿತವಾಗಿರುವುದಿಲ್ಲ.

 ಅಲ್ ಮಜಝ್, ಅಲ್ ಶುವಹೈನ್, ಬರ್ಡ್ಸ್ ಮಾರ್ಕೆಟ್ ಮತ್ತು ಬ್ಯಾಂಕ್ಸ್ ಸ್ಟ್ರೀಟ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವಾಹನ ನಿಲುಗಡೆ ಶುಲ್ಕದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಶಾರ್ಜಾ ಮುನಿಸಿಪಾಲಿಟಿಯ ಸಾರ್ವಜನಿಕ ವಾಹನ ನಿಲುಗಡೆ ವಿಭಾಗದ ನಿರ್ದೇಶಕ ಅಲಿ ಬೊಗಝಿನ್ ‘ಖಲೀಜ್ ಟೈಮ್ಸ್’ಗೆ ತಿಳಿಸಿದರು.

ಈ ಸ್ಥಳಗಳಲ್ಲಿ ವಾರಾಂತ್ಯಗಳು ಮತ್ತು ಸಾರ್ವಜನಿಕ ರಜಾ ದಿನಗಳಂದು ಉಚಿತ ವಾಹನ ನಿಲುಗಡೆ ಸೌಲಭ್ಯವನ್ನು ನೀಡಲಾಗಿತ್ತು.

ಆದರೆ, ಸಾರ್ವಜನಿಕರಿಂದ ಬಂದ ಸಲಹೆ ಸೂಚನೆಗಳು ಮತ್ತು ಕೈಗೊಳ್ಳಲಾದ ಅಧ್ಯಯನಗಳ ಆಧಾರದಲ್ಲಿ ಉಚಿತ ವಾಹನ ನಿಲುಗಡೆ ಸೌಲಭ್ಯವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News