ಜಿದ್ದಾ : ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಕರ್ತರ ಸಭೆ

Update: 2018-03-19 17:13 GMT

ಜಿದ್ದಾ,ಮಾ.19:ಅನಿವಾಸಿ ಭಾರತೀಯರ ಸಂಘಟನೆಯಾದ ಇಂಡಿಯನ್ ಸೋಶಿಯಲ್ ಫೋರಮ್(ಐ ಎಸ್ ಎಫ್)ನ ಕಾರ್ಯಕರ್ತರ ಸಭೆ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ಚುನಾವಣೆಯು ಇತ್ತೀಚೆಗೆ ಜಿದ್ದಾದಲ್ಲಿ ನಡೆಯಿತು.

ಚುನಾವಣಾ ಪ್ರಕ್ರಿಯೆಗೆ ಮುನ್ನ ಕಾರ್ಯಕರ್ತರ ಸಭೆ ನಡೆಯಿತು. ಇಂಡಿಯನ್ ಸೋಶಿಯಲ್ ಫೋರಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀ ಮಠ ಮಾತನಾಡಿ, ಪ್ರಸಕ್ತ ಭಾರತದ ರಾಜಕೀಯ ಸನ್ನಿವೇಶ ಮತ್ತು ಕಳೆದ ಅರುವತ್ತು ವರ್ಷಗಳಿಂದ ಹಿಂದುಳಿದ, ಅಲ್ಪಸಂಖ್ಯಾತ ಹಾಗು ದಲಿತರನ್ನು ರಾಜಕಾರಣಿಗಳು ಯಾವ ಯಾವ ರೀತಿಯಲ್ಲಿ ಶೋಷಿಸುತ್ತಿದ್ದಾರೆ ಎಂದು ವಿವರಿಸಿದರು. ಇದಕ್ಕೆಲ ಪರಿಹಾರವಾಗಿ ಈ ದಮನಿತ ವರ್ಗಗಳು ರಾಜಕೀಯವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸಂವಿಧಾನಬದ್ಧವಾಗಿ ತಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯುವಂತಾಗಬೇಕೆಂದು ಅವರು ಕರೆ ನೀಡಿದರು.

ನಂತರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರಿಫ್ ಬಜ್ಪೆಯವರು ನಾಯಕತ್ವ ಎಂಬ ವಿಷಯದಡಿ ಕಾರ್ಯಕರ್ತರಿಗೆ ನಾಯಕತ್ವದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಮಿತಿ ಉಪಾಧ್ಯಕ್ಷ ಸಂಶುದ್ದೀನ್ ವಹಿಸಿದ್ದರು. ಕೇಂದ್ರ ಕಾರ್ಯಾಕಾರಿ ಸಮಿತಿ ಸದಸ್ಯ ಮೊಹಿಯುದ್ದೀನ್ ಹಾಗು ರಾಜ್ಯ ಸಮಿತಿ ಸದಸ್ಯ ಹಾರಿಸ್ ಗೂಡಿನಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನಾಬ್ ಹನೀಫ್ ಹಾರಿಸ್, ಐಎಸ್ಎಫ್ ಕೇಂದ್ರ ಸಮಿತಿಯ ಉಪಾದ್ಯಕ್ಷರು ಸ್ವಾಗತಿಸಿದರು ಮತ್ತು ಆಸೀಫ್ ಗಂಜಿಮಠ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ತರುವಾಯ ಇಂಡಿಯನ್ ಸೋಷಿಯಲ್ ಫಾರಂ ಜಿದ್ದಾ ಇದರ ವಿವಿಧ ಘಟಕಗಳ ಪದಾಧಿಕಾರಿಗಳ ಚುನಾವಣೆ ನಡೆಯಿತು. 
ಬವಾದಿ ಘಟಕ: ಅಧ್ಯಕ್ಷರಾಗಿ ಫಾರೂಕ್ ಪುಣಚ, ಉಪಾಧ್ಯಕ್ಷರಾಗಿ ಶಫೀಕ್ ಆರ್ಲಪದವು, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಸುನ್ನತ್ ಕೆರೆ, ಜತೆ ಕಾರ್ಯದರ್ಶಿಯಾಗಿ ಹುರೈಸ್ ಬಪ್ಪಳಿಗೆ ಮತ್ತು ಶಕೂರ್ ಸಾಲೆತ್ತೂರ್ ನೇಮಕವಾದರು.
 

ಅಝೀಝಿಯ ಘಟಕ: ಅಧ್ಯಕ್ಷರಾಗಿ ಆಸೀಫ್ ಗಂಜಿಮಠ, ಉಪಾಧ್ಯಕ್ಷರಾಗಿ ಶೈಖ್ ವಾಹಿಬ್, ಪ್ರಧಾನ ಕಾರ್ಯದರ್ಶಿಯಾಗಿ ಬಷೀರ್ ಎಡಪದವು, ಜೊತೆ ಕಾರ್ಯದರ್ಶಿಗಳಾಗಿ ಎಜಾಝ್ ಖಾಲಿದ್ ಹಾಗು ಅಲ್ತಾಫ್ ಸುನ್ನತ್ ಕೆರೆ ನೇಮಕವಾದರು.

ಶರಫಿಯ ಘಟಕ: ಅಧ್ಯಕ್ಷರಾಗಿ ಇಲ್ಯಾಸ್ ಪಡುಬಿದ್ರೆ ,ಉಪಾಧ್ಯಕ್ಷರಾಗಿ ಶೊಹೈಬ್,ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್,ಜತೆ ಕಾರ್ಯದರ್ಶಿಯಾಗಿ ಆರಿಫ್ ಹಾಗು ಅಬ್ದುಲ್ ರಹಿಮಾನ್ ನೇಮಕವಾದರು.

ರುವೈಸ್ ಘಟಕ: ಅಧ್ಯಕ್ಷರಾಗಿ ಹಫೀಜ್,ಉಪಾಧ್ಯಕ್ಷರಾಗಿ ಇರ್ಷಾದ್,ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ ಕೆ ಹಾಗು ಜೊತೆ ಕಾರ್ಯದರ್ಶಿಗಳಾಗಿ ಫೈಝಲ್ ಮುಹಮ್ಮದ್ ಮತ್ತು ತಲಾಲ್ ನೇಮಕವಾದರು. 

ಈ ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿಗಳಾಗಿ ಮುಹಮ್ಮದ್ ಅಲಿ ಮೂಳೂರ್, ಮಹಮ್ಮದ್ ರಫೀ ಮಠ,ಆರಿಫ್ ಬಜ್ಪೆ ಹಾಗು ಹುಸೈನ್ ಜೋಕಟ್ಟೆ ಕಾರ್ಯನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News