ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸೌದಿ ಉದ್ಯಮಿ 4.8 ಶತಕೋಟಿ ಡಾಲರ್ ಸಾಲದ ಸುಳಿಯಲ್ಲಿ

Update: 2018-03-19 17:24 GMT

  ದಮ್ಮಾಮ್,ಮಾ.19: 2007ರಲ್ಲಿ ಫೋರ್ಬ್ಸ್ ಪ್ರಕಟಿಸಿದ ಜಗತ್ತಿನ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸೌದಿಯ ಉದ್ಯಮಿ ಮಾನ್ ಅಲ್ ಸನೆಯಾ ಈಗ ಸಾಲದ ಸುಳಿಗೆ ಸಿಲುಕಿದ್ದಾರೆ. ಮಾನ್ ಅಲ್ ಸನೆಯಾ ಹಾಗೂ ಅವರ ಕಂಪೆನಿಯು ಸಾಲಗಾರರಿಗೆ ನೀಡಬೇಕಾದ 18 ಶತಕೋಟಿ ರಿಯಾಲ್‌ಗಳನ್ನು (ಸುಮಾರು 4.8 ಶತಕೋಟಿ ಡಾಲರ್) ಮರುಪಾವತಿಸಲು ಸೋಮವಾರದಿಂದ ತನ್ನ ನೂರಾರು ವಾಹನಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ.

ಮಾನ್ ಅಲ್ ಸನೆಯಾ ಒಡೆತನದ ಸಾದ್ ಗ್ರೂಪ್ ತನ್ನ ಉದ್ಯೋಗಿಗಳಿಗೂ ಹಲವಾರು ತಿಂಗಳುಗಳ ವೇತನ ಬಾಕಿಯುಳಿಸಿಕೊಂಡಿದೆ. ಪ್ರಥಮ ಹಂತವಾಗಿ ವಾಹನಗಳ ಹರಾಜು ಆರಂಭಗೊಂಡಿದ್ದು, ಮುಂದಿನ ಹಂತದಲ್ಲಿ ಕಟ್ಟಡ ನಿವೇಶನ ಸೇರಿದಂತೆ ದೊಡ್ಡ ಗಾತ್ರದ ಆಸ್ತಿಗಳ ಹರಾಜು ಕೂಡಾ ನಡೆಯಲಿದೆ.

ಈ ವಾರವಿಡೀ 900 ವಾಹನಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಾದ್ ಗ್ರೂಪ್‌ಗೆ ಸೇರಿದ ಲಾರಿಗಳು, ಬಸ್‌ಗಳು, ಡಿಗ್ಗರ್‌ಗಳು, ಟ್ರಕ್‌ಗಳು ಸೇರಿದಂತೆ ವಿವಿಧ ವಾಹನಗಳ ಹರಾಜು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News