ಯುಎಇ: ಕೆಲಸ ಬದಲಾವಣೆಗೆ ‘ಉತ್ತಮ ನಡತೆ’ ಅಗತ್ಯ

Update: 2018-03-20 17:21 GMT

ದುಬೈ, ಮಾ. 20: ಯುಎಇಯಲ್ಲಿ ಕೆಲಸ ಮಾಡುತ್ತಿರುವ ವಿದೇಶೀಯರು ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಕೆಲಸಕ್ಕಾಗಿ ವಲಸೆ ಹೋಗುವಾಗ ‘ಉತ್ತಮ ನಡತೆ’ಯ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಯುಎಇಯಲ್ಲಿ ಕೆಲಸ ಬದಲಾಯಿಸುವ ವಿದೇಶೀಯರಿಗೆ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಯುಎಇಯ ವಿದೇಶ ವ್ಯವಹಾರಗಳ ಸಚಿವಾಲಯವು ‘ಖಲೀಜ್ ಟೈಮ್ಸ್’ಗೆ ಮಾಹಿತಿ ನೀಡಿದೆ.

ಆದರೆ, ಈ ಪ್ರಕಟನೆಯು ಫೆಬ್ರವರಿ 23ರಂದು ಹೊರಡಿಸಲಾದ ಸೂಚನೆಯೊಂದಕ್ಕೆ ವಿರುದ್ಧವಾಗಿದೆ.

ವಿದೇಶೀಯರು ಯುಎಇಯಲ್ಲೇ ಇದ್ದರೆ ವೀಸಾಕ್ಕಾಗಿ ಉತ್ತಮ ನಡತೆಯ ಪ್ರಮಾಣಪತ್ರ ಅಗತ್ಯವಿಲ್ಲ ಎಂಬುದಾಗಿ ಫೆಬ್ರವರಿ 23ರ ಸೂಚನೆ ಹೇಳಿತ್ತು.

ಆದರೆ, ಹೊಸ ಸೂಚನೆಯಂತೆ, ವಿದೇಶೀಯರು ಯುಎಇಯಲ್ಲೇ ಇದ್ದರೂ ಕೆಲಸ ಬದಲಾವಣೆ ಮಾಡುವಾಗ ಪೊಲೀಸರಿಂದ ಪ್ರಮಾಣಪತ್ರ ಪಡೆಯುವುದು ಅಗತ್ಯವಾಗಿದೆ.

ಯುಎಇಯಿಂದ ಹೊರಗಿದ್ದುಕೊಂಡು ಯುಎಇಯಲ್ಲಿ ಕೆಲಸ ಬಯಸುವವರು ತಮ್ಮ ವೀಸಾ ಪಡೆಯುವುದಕ್ಕಾಗಿ ಉತ್ತಮ ನಡತೆ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News