ಮರ್ಕಝುತ್ತಹಲೀಮ್ ದಮ್ಮಾಮ್ ಘಟಕದ ವತಿಯಿಂದ 'ಫಾಮಿಲಿ ಮುಲಾಕಾತ್-2018' ಕಾರ್ಯಕ್ರಮ
Update: 2018-03-21 22:21 IST
ದಮ್ಮಾಮ್, ಮಾ. 21: ಕಳೆದ 23 ವರ್ಷಗಳಿಂದ ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝುತ್ತಹಲೀಮ್ ವಿದ್ಯಾಸಂಸ್ಥೆ ಇದರ ಸೌದಿ-ದಮ್ಮಾಮ್ ಘಟಕವು ಮಾ. 22 ರಂದು ರಾತ್ರಿ ಫಾಮಿಲಿ ಮುಲಾಕಾತ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಧಾರ್ಮಿಕ ರಸಪ್ರಶ್ನೆ, ಕ್ರೀಡೆ, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮತ್ತು ವಿಜೇತರಿಗೆ ಸೂಕ್ತ ಬಹುಮಾನ ಗಳನ್ನೂ ನೀಡಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸುವಂತೆ ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0503897169/0551112399/0565555180/0548211610/0599948055/0540076537/0509459075/0535094637