ಒಮನ್: ಭಾರತೀಯ ಶಾಲೆಗಳಲ್ಲಿ ಶುಲ್ಕ ಪಾವತಿ ಇನ್ನು ಸುಲಭ

Update: 2018-03-24 17:24 GMT

ಮಸ್ಕತ್ (ಒಮನ್), ಮಾ. 24: ಒಮನ್‌ನಲ್ಲಿರುವ ಭಾರತೀಯ ಶಾಲೆಗಳ ವಿದ್ಯಾರ್ಥಿಗಳಿಗೆ ಇನ್ನು ಆರ್ಥಿಕ ಸಂಕಷ್ಟಗಳು ತಡೆಯಾಗುವುದಿಲ್ಲ. ಹೆತ್ತವರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಕಂತುಗಳಲ್ಲಿ ಪಾವತಿಸಬಹುದಾಗಿದೆ.

‘‘ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹೆತ್ತವರಿಗೆ ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಏಕಗಂಟಿನಲ್ಲಿ ಪಾವತಿಸಲು ಅಸಾಧ್ಯವಾದರೆ, ಅವರು ಲಿಖಿತ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅವರಿಗೆ ಸುಲಭ ಕಂತುಗಳಲ್ಲಿ ಶುಲ್ಕ ಪಾವತಿಸುವ ಅವಕಾಶವನ್ನು ನೀಡಲಾಗುವುದು’’ ಎಂದು ಶಾಲಾ ನಿರ್ದೇಶಕರ ಮಂಡಳಿಯ ಅಧ್ಯಕ್ಷ ವಿಲ್ಸನ್ ವಿ. ಜಾರ್ಜ್ ಹೇಳಿದ್ದಾರೆ.

ದೇಶದಲ್ಲಿರುವ ಹೆಚ್ಚಿನ ಶಾಲೆಗಳಲ್ಲಿ ಮರುಪಾವತಿ ಇಲ್ಲದ ಶುಲ್ಕಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಭಾರತೀಯ ಶಾಲೆಗಳೂ ತಮ್ಮ ಶುಲ್ಕವನ್ನು ಹೆಚ್ಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News