ಮಾ.30: ದುಬೈಯಲ್ಲಿ ಸಂಗೀತ ಸೌರಭ

Update: 2018-03-27 17:40 GMT

ದುಬೈ, ಮಾ. 27: ಲಲಿತ್ ಈವೆಂಟ್ಸ್ ( ಎಸ್ ಎಲ್ ಈವೆಂಟ್ಸ್ ) ಇದರ ಸಹಯೋಗದೊಂದಿಗೆ ಖ್ಯಾತ ಸ್ಯಾಂಡಲ್ ವುಡ್ ಗಾಯಕ ಮತ್ತು ಸಂಗೀತಗಾರ ಅರ್ಜುನ್ ಜನ್ಯ ಅವರು ಸಾರಥ್ಯ ನೀಡುವ ಸಂಗೀತ ಸೌರಭ -2018 (ಸಂಗೀತ ಸಂಜೆ)  ಊದ್ ಮೆಹ್ತಾ ಮೆಟ್ರೋ ಸ್ಟೇಷನ್ ಬಳಿ ಇರುವ ಶೇಕ್ ರಾಶಿದ್ ಸಭಾಂಗಣದಲ್ಲಿ ಮಾ.30ರಂದು ಸಂಜೆ  6 ಗಂಟೆಗೆ ನಡೆಯಲಿದೆ.

ಅರ್ಜುನ್ ಜನ್ಯ ಅವರೊಂದಿಗೆ ಇತರ ಗಾಯಕರಾದ ವ್ಯಾಸರಾಜ್ , ಅಜಯ್ ವಾರಿಯರ್ , ಅನುರಾಧ ಭಟ್, ಅನುಪಮಾ ಭಟ್, ಇಂದು ನಾಗರಾಜ್ , ಹರೀಶ್ ಶೇರಿಗಾರ್ ಮುಂತಾದ ಕಲಾ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಯುಎಇ ಕನ್ನಡಿಗ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ನೆರವೇರಲಿದ್ದು, ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಕನ್ನಡಿಗರು ದುಬೈ ಮುಖ್ಯಸ್ಥರಾದ ಶ್ರೀಯುತ ಸದನ್ ದಾಸ್ ಅವರು ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನಾ ಭಾಷಣ ಮತ್ತು ವಿವರಣೆಯನ್ನು ಸಂಗೀತ ಸೌರಭ -2018 ರ ಉಸ್ತುವಾರಿ ಮುಖಂಡರಾದ  ಶ್ರೀಯುತ ಅರುಣ್ ಕುಮಾರ್ ಎಂ ಕೆ  ಬೆಂಗಳೂರು ಅವರು ನೆರವೇರಿಸಲಿದ್ದಾರೆ. ಅದಲ್ಲದೆ ಯುಎಇ ದೇಶದಲ್ಲಿ ನೆಲಸಿರುವ ಅನೇಕ ಅನಿವಾಸಿ ಕನ್ನಡಿಗರ ಪ್ರಮುಖರು ನೇತಾರರು ಭಾಗವಹಿಸಲಿದ್ದಾರೆ.

ಸಂಗೀತ ಸಂಜೆಯ ಟಿಕೆಟ್ ದರವು 100, 50, 25 ಎಂದು ವಿಂಗಡಿಸಿದ್ದು ಹೆಚ್ಚಿನ ವಿವರಗಳಿಗೆ  ಮತ್ತು ಟಿಕೆಟ್ ಗಳಿಗಾಗಿ ಈ ಕೆಳಗೆ ನಮೂದಿಸಿದ ನಂಬರುಗಳನ್ನು ಸಂಪರ್ಕಿಸಿ ( 0567012123 0507576238, 0502433263, 0569916774, 0509520336, 0558223389, 0504587390, 0521138422, 0506125464, 0557334228)

ಕನ್ನಡಿಗರು ದುಬೈ ಮುಖ್ಯಸ್ಥರಾದ ಸದನ್ ದಾಸ್ ಅವರ ಸಾರಥ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಮಲ್ಲಿಕಾರ್ಜುನ ಗೌಡ ,ವೀರೇಂದ್ರ ಬಾಬು , ಉಮಾ ವಿಧ್ಯಾದರ್ ಶಿಮೊಗ್ಗ , ಸಮಿತಿ ಸದಸ್ಯರುಗಳಾದ ಅರುಣ್ ಕುಮಾರ್ ಎಂ ಕೆ  ಬೆಂಗಳೂರು , ದೀಪಕ್ ಸೋಮಶೇಖರ್ ಬೆಂಗಳೂರು , ಚಂದ್ರಕಾಂತ್ , ಮಮತಾ ಜಿತೇನ್ದ್ರ, ಶ್ರೀನಿವಾಸ್ ಅರಸ್ ಬೆಂಗಳೂರು , ವಿಜಯ ಶಿವರುದ್ರಪ್ಪ , ಮಲ್ಲಿಕಾರ್ಜುನ ಅಂಗಡಿ , ಚಂದ್ರಶೇಖರ್ ಪೂಜಾರಿ, ವೆಂಕಟರಾಮನ್ ಕಾಮತ್   ಮತ್ತು ರಫೀಕಲಿ ಕೊಡಗು ಮುಂತಾದವರು ಹಾಜರಿದ್ದರು.

Writer - ರಫೀಕಲಿ ಕೊಡಗು, ದುಬೈ

contributor

Editor - ರಫೀಕಲಿ ಕೊಡಗು, ದುಬೈ

contributor

Similar News