ವಿದೇಶಿಯರ ಶುಲ್ಕ ಹೆಚ್ಚಳ: ಗುತ್ತಿಗೆದಾರರಿಗೆ ಸೌದಿ ಪರಿಹಾರ
Update: 2018-03-28 23:32 IST
ರಿಯಾದ್, ಮಾ. 28: 2016ರ ಡಿಸೆಂಬರ್‌ಗಿಂತ ಮೊದಲು ಅಂಗೀಕಾರಗೊಂಡ ಸರಕಾರಿ ಯೋಜನೆಗಳಲ್ಲಿ ಆಗಿರುವ ವಿದೇಶಿ ಕೆಲಸಗಾರರ ಶುಲ್ಕ ಹೆಚ್ಚಳದ ಹಿನ್ನೆಲೆಯಲ್ಲಿ, ಗುತ್ತಿಗೆದಾರರು ಪಾವತಿಸಿರುವ ಹೆಚ್ಚುವರಿ ಮೊತ್ತವನ್ನು ಭರಿಸುವುದಾಗಿ ಸೌದಿ ಅರೇಬಿಯ ಮಂಗಳವಾರ ಹೇಳಿದೆ.
‘‘ವಿದೇಶಿ ಕಾರ್ಮಿಕರ ಮೇಲೆ ವಿಧಿಸಲಾಗಿರುವ ಮಾಸಿಕ ಶುಲ್ಕಗಳ ಮರುಪರಿಶೀಲನೆ ನಡೆಸಿದ ಬಳಿಕ, 2016 ಡಿಸೆಂಬರ್‌ಗಿಂತ ಮೊದಲು ಸರಕಾರಿ ಗುತ್ತಿಗೆಗಳನ್ನು ಪಡೆದುಕೊಂಡಿರುವ ಕಂಪೆನಿಗಳಿಗೆ ಪರಿಹಾರ ನೀಡುವಂತೆ ಸಚಿವ ಸಂಪುಟವು ಹಣಕಾಸು ಸಚಿವಾಲಯಕ್ಕೆ ಆದೇಶ ನೀಡಿದೆ’’ ಎಂದು ಅಧಿಕೃತ ಸುದ್ದಿ ಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.