“ತೈಲ ಟ್ಯಾಂಕರ್ ಮೇಲಿನ ದಾಳಿ ಖಂಡಿಸಿ”

Update: 2018-04-06 18:12 GMT

ರಿಯಾದ್, ಎ. 6: ಯಮನ್‌ನ ಹೊಡೈಡಾ ಬಂದರಿನ ಪಶ್ಚಿಮಕ್ಕೆ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಸೌದಿ ಅರೇಬಿಯದ ತೈಲ ಟ್ಯಾಂಕರೊಂದರ ಮೇಲೆ ಹೌದಿ ಬಂಡುಕೋರರು ಮಂಗಳವಾರ ನಡೆಸಿದ ದಾಳಿಯನ್ನು ಖಂಡಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸೌದಿ ಅರೇಬಿಯ ಒತ್ತಾಯಿಸಿದೆ.

ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿರುವುದಕ್ಕಾಗಿ ಹೌದಿ ಬಂಡುಕೋರರು ಮತ್ತು ಇರಾನನ್ನು ಜವಾಬ್ದಾರರನ್ನಾಗಿಸುವಂತೆಯೂ ಸೌದಿ ಅರೇಬಿಯವು ಭದ್ರತಾ ಮಂಡಳಿಗೆ ಕರೆ ನೀಡಿದೆ.

ಹೌದಿ ಬಂಡುಕೋರರು ನಡೆಸುತ್ತಿರುವ ದಾಳಿಯು ಉಲ್ಬಣಗೊಳ್ಳದಂತೆ ತಡೆಯಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಸಂಖ್ಯೆ 2216 ಮತ್ತು 2231ಗಳನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆಯೂ ಪತ್ರವೊಂದರಲ್ಲಿ ಸೌದಿ ಅರೇಬಿಯವು ಭದ್ರತಾ ಮಂಡಳಿಯನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News