ದುಬೈಯಲ್ಲಿ 6.5 ಕೋಟಿ ರೂ. ಗೆದ್ದ ಕೇರಳದ ಮೆಕ್ಯಾನಿಕ್ !

Update: 2018-04-10 18:03 GMT

ದುಬೈ, ಎ. 10: ಶಾರ್ಜಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೆಕ್ಯಾನಿಕ್ ಒಬ್ಬರು ಮಂಗಳವಾರ 1 ಮಿಲಿಯ ಡಾಲರ್ (ಸುಮಾರು 6.5 ಕೋಟಿ ರೂಪಾಯಿ) ಲಾಟರಿ ಗೆದ್ದಿದ್ದಾರೆ.

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾನ್‌ಕೋರ್ಸ್‌ನಲ್ಲಿ ನಡೆದ ‘ದುಬೈ ಡ್ಯೂಟಿ ಫ್ರೀ ಮಿಲೇನಿಯಂ ಮಿಲಿಯನೇರ್ ಡ್ರಾ’ದಲ್ಲಿ 36 ವರ್ಷದ ಕೇರಳ ನಿವಾಸಿ ಪಿಂಟೊ ಪೌಲ್ ತೊಮ್ಮಾನರಿಗೆ ಅದೃಷ್ಟ ಒಲಿದಿದೆ.

ಶಾರ್ಜಾದ ಆಟೊಮೋಟಿವ್ ವರ್ಕ್‌ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿರುವ ಪೌಲ್ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ್ದರು ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಗೆಳೆಯನೊಂದಿಗೆ ಸಮಪಾಲು

ಪೌಲ್ ತನ್ನ ಬಹುಮಾನ ಹಣವನ್ನು ಗೆಳೆಯ ಕೇರಳದವರೇ ಆಗಿರುವ ಫ್ರಾನ್ಸಿಸ್ ಸೆಬಾಸ್ಟಿಯನ್ ಜೊತೆ ಸಮವಾಗಿ ಹಂಚಿಕೊಳ್ಳಲಿದ್ದಾರೆ. ಟಿಕೆಟ್ ಹಣ 1000 ದಿರ್ಹಮ್ (18,000 ರೂಪಾಯಿ)ನ್ನು ಅವರಿಬ್ಬರು ಸಮವಾಗಿ ಹಂಚಿಕೊಂಡಿದ್ದರು.

ದುಬೈ ಡ್ಯೂಟಿ ಫ್ರಿ ಡ್ರಾ ಲಾಟರಿ 1999ರಲ್ಲಿ ಆರಂಭಗೊಂಡ ಬಳಿಕ, 1 ಮಿಲಿಯ ಡಾಲರ್ ಬಹುಮಾನ ಗೆಲ್ಲುತ್ತಿರುವ 128ನೇ ಭಾರತೀಯ ಪೌಲ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News