ದುಬೈ: ಬಾಲಕಿಗೆ ಅಶ್ಲೀಲ ವೀಡಿಯೊ ಕಳುಹಿಸಿದ ಭಾರತೀಯನಿಗೆ ಜೈಲು

Update: 2018-04-12 17:13 GMT

ದುಬೈ, ಎ. 12: ತನ್ನ ಸ್ನೇಹಿತೆಯ 13 ವರ್ಷದ ಮಗಳಿಗೆ ಇಮೇಲ್ ಮೂಲಕ ನೀಲಿಚಿತ್ರಗಳ ವೀಡಿಯೊಗಳನ್ನು ಕಳುಹಿಸಿದ ಹಾಗೂ ಮನೆಗೆ ಭೇಟಿ ನೀಡುವಾಗ ಲೈಂಗಿಕವಾಗಿ ಪೀಡಿಸಿದ ಆರೋಪದಲ್ಲಿ ಭಾರತೀಯ ವ್ಯಕ್ತಿಯೊಬ್ಬನಿಗೆ ದುಬೈಯ ನ್ಯಾಯಾಲಯವೊಂದು 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

  ಭಾರತದವರೇ ಆಗಿರುವ ಬಾಲಕಿಯ ತಾಯಿ ತನ್ನ ಮಗಳ ಇಮೇಲ್‌ಗಳನ್ನು ಪರಿಶೀಲಿಸುತ್ತಿದ್ದಾಗ, ಈ ವ್ಯಕ್ತಿ ಕಳುಹಿಸಿದ ನೀಲಿಚಿತ್ರಗಳುಳ್ಳ ಇಮೇಲ್‌ಗಳು ಸಿಕ್ಕಿದವು. ಈ ವ್ಯಕ್ತಿಯು 2017 ಆಗಸ್ಟ್‌ನಲ್ಲಿ ಹಲವಾರು ನೀಲಿಚಿತ್ರಗಳ ವೀಡಿಯೊಗಳನ್ನು ಬಾಲಕಿಗೆ ಕಳುಹಿಸಿದ್ದನು.

ಈ ಬಗ್ಗೆ ಪ್ರಶ್ನಿಸಿದಾಗ, 27 ವರ್ಷದ ಕುಟುಂಬ ಸ್ನೇಹಿತ ತನ್ನನ್ನು ನಿರಂತರವಾಗಿ ಅಶ್ಲೀಲವಾಗಿ ಸ್ಪರ್ಶಿಸುತ್ತಿದ್ದ ವಿಷಯವನ್ನು ಮಗಳು ಹೇಳಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News