ಸೌದಿ ನಗರಗಳತ್ತ ಕ್ಷಿಪಣಿ ಹಾರಿಸಿದ ಹೌದಿ ಬಂಡುಕೋರರು

Update: 2018-04-12 17:36 GMT
ಸಾಂದರ್ಭಿಕ ಚಿತ್ರ

ಜಿದ್ದಾ (ಸೌದಿ ಅರೇಬಿಯ), ಎ. 12: ರಾಜಧಾನಿ ರಿಯಾದ್, ಜಝನ್ ಮತ್ತು ನಜ್ರನ್ ನಗರಗಳು ಮತ್ತು ಅಭ ವಿಮಾನ ನಿಲ್ದಾಣಗಳತ್ತ ಯಮನ್‌ನ ಹೌದಿ ಬಂಡುಕೋರರು ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಗಳನ್ನು ಸೌದಿ ಅರೇಬಿಯದ ವಾಯು ರಕ್ಷಣಾ ಪಡೆಗಳು ತುಂಡರಿಸಿವೆ.

ಸೌದಿ ವಾಯು ರಕ್ಷಣಾ ಪಡೆಗಳು ರಿಯಾದ್‌ನತ್ತ ಧಾವಿಸುತ್ತಿದ್ದ ಕ್ಷಿಪಣಿಯನ್ನು ಯಶಸ್ವಿಯಾಗಿ ತುಂಡರಿಸಿದಾಗ ಆಕಾಶದಲ್ಲಿ ಬೃಹತ್ ಸದ್ದು ಮತ್ತು ಹೊಗೆ ಉಂಟಾಯಿತು.

ದಾಳಿಯಲ್ಲಿ ಸಾವು-ನೋವು ಉಂಟಾಗಿರುವ ಅಥವಾ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ.

ಎಲ್ಲ ಕ್ಷಿಪಣಿಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ಯಶಸ್ವಿಯಾಗಿ ತಡೆದಿವೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News