ಸೌದಿಯತ್ತ ಮತ್ತೆ ಕ್ಷಿಪಣಿ ಹಾರಿಸಿದ ಹೌದಿ ಬಂಡುಕೋರರು

Update: 2018-04-20 17:16 GMT
ಸಾಂದರ್ಭಿಕ ಚಿತ್ರ

ರಿಯಾದ್, ಎ. 20: ಹೌದಿ ಬಂಡುಕೋರರು ಯಮನ್‌ನಿಂದ ಸೌದಿ ಅರೇಬಿಯದ ಗಡಿ ರಾಜ್ಯ ಜಝನ್‌ನತ್ತ ಶುಕ್ರವಾರ ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಸೌದಿ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ.

ಇದಕ್ಕೂ ಮೊದಲು ಸೋಮವಾರ ಹೌದಿ ಬಂಡುಕೋರರು ಹಾರಿಸಿದ್ದ ಇನ್ನೊಂದು ಕ್ಷಿಪಣಿಯನ್ನೂ ಸೌದಿ ಪಡೆಗಳು ಹೊಡೆದುರುಳಿಸಿದ್ದವು.

ಮುಂದೆ ಕ್ಷಿಪಣಿ ದಾಳಿ ನಡೆದರೆ ನೀಡಲಾಗುವ ಪ್ರತಿಕ್ರಿಯೆ ‘ನೋವಿನಿಂದ’ ಕೂಡಿರುತ್ತದೆ ಎಂಬುದಾಗಿ ಸೌದಿ ಅರೇಬಿಯ ಎಚ್ಚರಿಸಿದ ಗಂಟೆಗಳ ಬಳಿಕ ಹೊಸ ದಾಳಿ ನಡೆದಿದೆ.

ಈವರೆಗೆ, ಹೌದಿ ಬಂಡುಕೋರರು 100ಕ್ಕೂ ಅಧಿಕ ಕ್ಷಿಪಣಿಗಳನ್ನು ಸೌದಿ ನಗರಗಳತ್ತ ಉಡಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News