ಶಾರ್ಜಾದಲ್ಲಿ ಆಸ್ತಿ ಖರೀದಿಗೆ ವಾಸ್ತವ್ಯ ವೀಸಾ ಕಡ್ಡಾಯವಲ್ಲ

Update: 2018-04-21 17:00 GMT

ಶಾರ್ಜಾ (ಯುಎಇ), ಎ. 21: ಶಾರ್ಜಾದಲ್ಲಿ ಅರಬ್ಬಿಯೇತರರು ಆಸ್ತಿ ಖರೀದಿಸಲು ಇನ್ನು ಮುಂದೆ ಯುಎಇ ವಾಸ್ತವ್ಯ ವೀಸಾವನ್ನು ಹೊಂದಬೇಕಾಗಿಲ್ಲ. ಇದು ಶಾರ್ಜಾ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ.

ಶಾರ್ಜಾ ಸರಕಾರವು 2014ರಲ್ಲಿ ತನ್ನ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ವಿದೇಶಿ ಹೂಡಿಕೆಗೆ ಮುಕ್ತಗೊಳಿಸಿತ್ತು ಹಾಗೂ ವಿದೇಶೀಯರು ಆಸ್ತಿ ಖರೀದಿಸಲು ಅವಕಾಶ ನೀಡಿತ್ತು. ಆದರೆ, ಆಸ್ತಿ ಖರೀದಿಸುವವರು ಯುಎಇ ವಾಸ್ತವ್ಯ ವೀಸಾ ಹೊಂದುವುದನ್ನು ಕಡ್ಡಾಯಗೊಳಿಸಿತ್ತು.

2014ರಲ್ಲಿ ಕೆಲವೇ ಪ್ರದೇಶಗಳನ್ನು ವಿದೇಶಿ ಹೂಡಿಕೆಗೆ ತೆರೆಯಲಾಗಿತ್ತು.

ಸರಕಾರದ ನೂತನ ಶಾಸನದ ಪ್ರಕಾರ, ತಿಲಾಲ್ ನಗರದಲ್ಲಿ ಆಸ್ತಿ ಖರೀದಿಸಲು ವಿದೇಶಿ ಹೂಡಿಕೆದಾರರು ಯುಎಇ ವಾಸ್ತವ್ಯ ವೀಸಾವನ್ನು ಹೊಂದಬೇಕಾಗಿಲ್ಲ ಎಂದು ಸರಕಾರಿ ಹೂಡಿಕೆ ಸಂಸ್ಥೆ ತಿಲಾಲ್ ಪ್ರಾಪರ್ಟೀಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News