ಬಹರೈನ್: ಕನ್ನಡ ಸಂಘದ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಮರು ಆಯ್ಕೆ

Update: 2018-04-25 08:25 GMT

ಬಹರೈನ್, ಎ.24: ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ‘ಕನ್ನಡ ಸಂಘ’ದ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಮರು ಆಯ್ಕೆ ನಡೆದಿದೆ.

ಪ್ರದೀಪ್ ಶೆಟ್ಟಿ 2017-18ರ ಸಾಲಿನಲ್ಲಿ ಸಂಘದ ಅಧ್ಯಕ್ಷರಾಗಿ ತನ್ನ ಪ್ರಥಮ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ಹಿನ್ನೆಲೆಯಲ್ಲಿ 2018-19ರ ಸಾಲಿಗೆ ಅಭ್ಯರ್ಥಿಯಾಗಿ ಅವರು ಪುನರಾಯ್ಕೆಗೊಂಡಿದ್ದಾರೆ.

ಕಳೆದ ಸುಮಾರು ಮೂರು ದಶಕಗಳಿಂದ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಪ್ರದೀಪ್ ಶೆಟ್ಟಿ, ಇಲ್ಲಿನ ಗಲ್ಫ್ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದ್ವೀಪದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಈ ಹಿಂದೆ ’ಬಂಟ್ಸ್ ಬಹರೈನ್’ನ ಅಧ್ಯಕ್ಷರಾಗಿ ಎರಡು ಅವಧಿಗಳಿಗೆ ಸೇವೆ ಸಲ್ಲಿಸಿದ್ದಾರೆ.

ಪ್ರದೀಪ್ ಶೆಟ್ಟಿ ಮಾತ್ರವಲ್ಲದೆ ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳೆಲ್ಲರೂ ಮರು ಆಯ್ಕೆಗೊಂಡಿದ್ದು ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಎ.27ರಂದು ಸಂಜೆ 6ಕ್ಕೆ ಇಲ್ಲಿನ ಇಂಡಿಯನ್ ಕ್ಲಬ್‌ನ ಸಭಾಂಗಣದಲ್ಲಿ ಜರುಗಲಿದೆ.

ಚಿತ್ರದಲ್ಲಿ ಕಾಣುತ್ತಿರುವಂತೆ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ

ಚಿತ್ರದಲ್ಲಿ: ಕುಳಿತವರು (ಎಡದಿಂದ ಬಲಕ್ಕೆ) ಚಂದ್ರಹಾಸ ಐಲ್ -ಆಂತರಿಕ ಲೆಕ್ಕ ಪರಿಶೋಧಕರು, ಪ್ರವೀಣ್ ಶೆಟ್ಟಿ ಕಿನ್ನಿಗೋಳಿ -ಖಜಾಂಚಿ, ಕಿರಣ್ ಉಪಾಧ್ಯಾಯ್-ಪ್ರಧಾನ ಕಾರ್ಯದರ್ಶಿ, ಪ್ರದೀಪ್ ಶೆಟ್ಟಿ -ಅಧ್ಯಕ್ಷರು, ಡಿ.ರಮೇಶ್ -ಉಪಾಧ್ಯಕ್ಷರು, ವರುಣ್ ಹೆಗ್ಡೆ -ಮನೋರಂಜನಾ ಕಾರ್ಯದರ್ಶಿ.

ನಿಂತವರು (ಎಡದಿಂದ ಬಲಕ್ಕೆ)ಅಯ್ಯಪ್ಪ ಎಡನೀರು -ಸಮಿತಿ ಸದಸ್ಯ, ಮಹೇಶ್ ಕುಮಾರ್ ಕೆ.-ಕ್ರೀಡಾ ಕಾರ್ಯದರ್ಶಿ, ಅರುಣ್ ಐರೋಡಿ -ಸಹ ಕಾರ್ಯದರ್ಶಿ, ಪ್ರಕಾಶ್ ಅಂಚನ್ -ಸಮಿತಿ ಸದಸ್ಯ, ಜಗದೀಶ ಜೆಪ್ಪು -ಉಪ ಮನೋರಂಜನಾ ಕಾರ್ಯದರ್ಶಿ, ಸಂತೋಷ್ ಆಚಾರ್ಯ -ಸಮಿತಿ ಸದಸ್ಯ, ಅಶೋಕ್ ಕಟೀಲ್ -ಉಪ ಖಜಾಂಚಿ.

ವರದಿ: ಕಮಲಾಕ್ಷ ಅಮೀನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News