ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರನ್ನು ಕಡೆಗಣಿಸಲಾಗಿದೆ: ಇಂಡಿಯನ್ ಸೋಶಿಯಲ್ ಫೋರಂ

Update: 2018-04-29 18:14 GMT

ಜಿದ್ದಾ, ಎ. 29: ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷವಾದ ಕಾಂಗ್ರೆಸ್ ಪ್ರಕಟಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರನ್ನು ಕಡೆಗಣಿಸಲಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಚಾಪ್ಟರ್ ಆರೋಪಿಸಿದೆ.

ಇಂಡಿಯನ್ ಸೋಶಿಯಲ್ ಫೋರಂ ಈಗಾಗಲೇ ಗಲ್ಫ್ ರಾಷ್ಟ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಹಾಗು ಅನಿವಾಸಿ ಕನ್ನಡಿಗರ ಎಲ್ಲಾ ಸಮಸ್ಯೆಗಳನ್ನು ಅನಿವಾಸಿ ಕನ್ನಡಿಗರ ಫೋರಂ ಮುಖಾಂತರ ಕಾಂಗ್ರೆಸ್ ಸರಕಾರದ ಗಮನಕ್ಕೆ ತಂದಿತ್ತು ಹಾಗು ಮುಂದಿನ ಕ್ರಿಯಾ ಯೋಜನೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಹಲವಾರ ಯೋಜನೆಗಳನ್ನು ಸರಕಾರದ ಹಾಗು ಅನಿವಾಸಿ ಕನ್ನಡಿಗರ ಫೋರಂ ಮೂಲಕ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಮುಂದಿನ ಸರಕಾರದ ರಚನೆ ನಂತರ ನಡೆಸುತ್ತೇವೆ ಎಂದು ಕಾಂಗ್ರೆಸ್ ಪ್ರಕಟಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಯಾವುದೇ ಯೋಜನೆಗಳನ್ನು ಪ್ರಕಟಿಸದೆ ಅನಿವಾಸಿ ಕನ್ನಡಿಗ ಸಮುದಾಯವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗಣಿಸಿದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಪತ್ರಿಕಾ ಪ್ರಕಟನೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಖಂಡಿಸಿದೆ.

ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯಂತೆ ಭಾರತವು ಹೊರದೇಶಗಳಿಂದ ಬ್ಯಾಂಕಿಗೆ ಹಣ ಜಮಾ ಮಾಡುವ ದೇಶಗಳಲ್ಲಿ ಮೂರನೇ ಸ್ಥಾನದಲ್ಲಿದೆ ಹಾಗು ಈ ಆದಾಯದಲ್ಲಿ 50 ಪ್ರತಿಶತ ಗಲ್ಫ್ ದೇಶಗಳಿಂದ ಬರುತ್ತಿದೆ. ಈ ಪ್ರಕ್ರಿಯೆಯಲ್ಲಿ ಅನಿವಾಸಿ ಕನ್ನಡಿಗರ ಪಾಲು ಬಹಳಷ್ಟಿದೆ.

ಅನಿವಾಸಿ ಕನ್ನಡಿಗರಲ್ಲಿ ಕರಾವಳಿ ಕರ್ನಾಟಕದಲ್ಲಿ ಅನಿವಾಸಿಗರಿಂದ ಬಹಲಷ್ಟು ಸಾಮುದಾಯಿಕ ಸೇವೆಗಳು ನಡೆಯುತ್ತಿವೆ. ಹಲವು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹಲವಾರು ಸಾಮಾಜಿಕ ಸೇವಾ ಸಂಸ್ಥೆಗಳು ಅನಿವಾಸಿಗಳಿಂದ ನಡೆಸಲ್ಪಡುತ್ತಿವೆ ಆದರೆ ಗಲ್ಪ್ ರಾಷ್ಟ್ರಗಳ ಸ್ಪದೇಶಿಕರಣದಿಂದಾಗಿ ಹಲವಾರು ಅನಿವಾಸಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗದ ಸಮಸ್ಯೆಯಿಂದ ಕರ್ನಾಟಕ ತಲುಪುತ್ತಿದ್ದಾರೆ ಆದುದರಿಂದ ಕರ್ನಾಟಕ ಕಾಂಗ್ರೆಸ್ ಪಕ್ಷ ತನ್ನ ಚುಣಾವಣಾ ಪ್ರಣಾಳಿಕೆಯನ್ನು ತಿದ್ದುಪಡಿಗೊಳಿಸಿ, ಅನಿವಾಸಿ ಭಾರತೀಯರಿಗೆ ಹಲವು ಯೋಜನೆಗಳನ್ನು ಪ್ರಕಟಿಸಬೇಕಾಗಿ ಇಂಡಿಯನ್ ಸೋಶಿಯಲ್ ಪೋರಂ ಆಗ್ರಹಿಸುತ್ತಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ ಮತ್ತು ಇಂಡಿಯನ್ ಸೋಶಿಯಲ್ ಪೋರಂ ಅನಿವಾಸಿ ಕನ್ನಡುಗರಿ ಸಮಸ್ಯೆಗಳ ಬಗೆಗಿನ ಅಂಶಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಬೇಕೆಂದು ಮನವಿ ಮಾಡುತ್ತಿದೆ.

1. ಅನಿವಾಸಿ ಕನ್ನಡಿಗರಿಗಾಗಿ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಮೈಸೂರ್, ಬೆಂಗಳೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಅನಿವಾಸಿ ಸಹಾಯ ಕೇಂದ್ರ ತೆರೆಯಬೇಕು.

2. ಗಲ್ಫ್ ಅನಿವಾಸಿ ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಕೋಟಾ ಆರಂಭಿಸಬೇಕು.

3. ಎನ್ ಅರ್ ಐ ಡಾಟಾ ಬ್ಯಾಂಕ್ ಆರಂಭಿಸಿ, ಅನಿವಾಸಿ ಕನ್ನಡಿಗರ ಸರ್ವೇ ನಡೆಸಿ ಅಂಕಿ ಅಂಶ ಪಡೆಯಬೇಕು.

4. ಅಂತರ್ಜಾಲದಲ್ಲಿ ಅನಿವಾಸಿ ಕನ್ನಡಿಗರಿಗೆ ತಮ್ಮ ಸಮಸ್ಯೆ ಹಾಗೂ ಸೌಲಭ್ಯಗಳನ್ನು ಪಡೆಯುವಂತಹ ವ್ಯವಸ್ಥೆ ಮಾಡಬೇಕು.

5. ಗಲ್ಪ್ ನಿಂದ ಕರ್ನಾಟಕಕ್ಕೆ ಮರಳಿದ ಅನಿವಾಸಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಸೇವೆ ನೀಡಬೇಕು.

6. ಗಲ್ಪ್ ರಾಷ್ಟ್ರಗಳ ಅನಿವಾಸಿ ಕನ್ನಡಿಗರಿಗಾಗಿ ಎನ್ ಅರ್ ಐ ಫಂಡ್ ಸ್ಥಾಪಿಸಿ, ಹಣಕಾಸಿದ ನೆರವು ನೀಡುವ ಬಗ್ಗೆ ಖಾತರಿ ನೀಡಬೇಕು.

7. ಗಲ್ಪ್ ನಿಂದ ಮರಳಿ ಬಂದ ಅನಿವಾಸಿಗಳಿಗೆ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ನೀಡಬೇಕು ಎಂದು ಇಂಡಿಯನ್ ಸೋಶಿಯಲ್ ಫಾರಂ ಕರ್ನಾಟಕ ಚಾಪ್ಟರ್ ಪ್ರಕಟನೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News