ದುಬೈ: ಅಲ್ ಹಾಜ್ ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ನೌಫಲ್ ಸಖಾಫಿ ಕಳಸ ಆಯ್ಕೆ.

Update: 2018-05-01 17:06 GMT
ಇಬ್ರಾಹೀಂ ಮುಸ್ಲಿಯಾರ್- ನೌಫಲ್ ಸಖಾಫಿ ಕಳಸ

ದುಬೈ, ಮೇ 1: ದುಬೈ ಸರ್ಕಾರದ ವತಿಯಿಂದ ಪ್ರತೀ ವರ್ಷ ನಡೆಯುವ ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್ ಆನ್ ಅವಾರ್ಡ್ ಸಮಿತಿಯ ಈ ವರ್ಷದ ಖುರ್'ಆನ್ ಪ್ರಭಾಷಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ, ಸಮಸ್ತ ಕೇಂದ್ರ ಮುಶಾವರ ಸಮಿತಿ  ಸದಸ್ಯರೂ, ಉಡುಪಿ ಜಿಲ್ಲಾ ಸಂಯುಕ್ತ ಖಾಝಿಯೂ ಆಗಿರುವ  ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ರವರು ಆಗಮಿಸಲಿದ್ದು,  ಬಹುಭಾಷಾ ಭಾಷಣಗಾರ, ಖ್ಯಾತ ವಾಗ್ಮಿ, ಮೂಡಬಿದ್ರೆ ಝಿಕ್ರಾ ಥಿಯೋಲೋಜಿಕಲ್ ಅಕಾಡೆಮಿ ಸಂಸ್ಥಾಪಕರೂ ಆದ ನೌಫಲ್ ಸಖಾಫಿ ಕಳಸ ಆಯ್ಕೆಯಾಗಿದ್ದಾರೆ.

ಮೇ 31ರಂದು ದುಬೈ ಮುಹೈಸಿನ ಇಂಡಿಯನ್ ಅಕಾಡಮಿ ಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ನಿರ್ವಹಣೆಗೆ ದುಬೈ ಜಾಮಿಯಾ ಸಆದಿಯ ಅಧೀನದಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು. ಸಯ್ಯದ್ ಫಝಲ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಹ್ಮದ್ ಮುಸ್ಲಿಯಾರ್ ಮೇಲ್ಪರಂಬು ಉದ್ಘಾಟಿಸಿದರು. ಅಬೂಬಕರ್ ಸಅದಿ ಆಳಕ್ಕಾಡ್ ಸಭೆಯನ್ನು ಸ್ವಾಗತಿಸಿದರು.

ಮುನೀರ್ ಬಾಖವಿ ತುರುತ್ತಿ ವಿಷಯ ಮಂಡನೆ ಮಾಡಿದರು. ಅಮೀರ್ ಹಸ್ಸನ್ ಕನ್ಯಪ್ಪಾಡಿ ಕಾರ್ಯಕ್ರಮದ ರೂಪುರೇಖೆಯನ್ನು ಸಭೆಯ ಮುಂದೆ ವಾಚಿಸಿದರು. ಸ-ಆದಿಯಾ ಕೋಶಾಧಿಕಾರಿ ಜಲೀಲ್ ಹಾಜಿ ಗುರುವಾಯೂರು, ಐ.ಸಿ.ಎಫ್ ಸೆಂಟ್ರಲ್ ಕಮಿಟಿ ಪ್ರತಿನಿಧಿ ನಜೀಮ್ ತಿರುವನಂತಪುರಂ, ಅಶ್ರಫ್ ಪಾಲಕ್ಕಾಡ್, ಕೆ.ಸಿ.ಎಫ್ ನ್ಯಾಷನಲ್ ಪ್ರತಿನಿಧಿ ಇಕ್ಬಾಲ್ ಕಾಜೂರ್,  ಯೂಸುಫ್ ಉರುವಲ್ಪದವು ಸಭೆಗೆ ಶುಭ ಹಾರೈಸಿದರು. ಸ್ವಾಗತ ಸಮಿತಿ ಕನ್ವಿನರ್ ಯಾಹ್ಯಾ ಸಖಾಫಿ ಆಲಪ್ಪುಝ ಸಭೆಗೆ ಧನ್ಯವಾದ ಹೇಳಿದರು.

ಸ್ವಾಗತ ಸಮಿತಿ ಪದಾಧಿಕಾರಿಗಳಯಾಗಿ ಈ ಕೆಳಗಿನಂತೆ ಆಯ್ಕೆಗೊಂಡರು. ಸಯ್ಯದ್ ತ್ವಾಹ ಬಾಫಖಿ ಸಖಾಫಿ (ಚೈರ್ಮಾನ್) ಸಯ್ಯದ್ ಹುಸೈನ್ ತಂಘಳ್ ವಾಡಾಣಪ್ಪಲ್ಲಿ, ಸಯ್ಯದ್ ಫಝಲ್ ತಂಙಳ್, ಸಲಾಂ ಸಖಾಫಿ ವೆಳ್ಳಾಲಶೇರಿ, ಸೈನುದ್ದೀನ್ ವಿಳಯಿಲ್, ಸಿ.ಎಂ.ಏ ಚೇರೂರ್, ಜಲೀಲ್ ನಿಝಮಿ ಎರ್ಮಾಡ್ (ವೈಸ್ ಚೈರ್ಮಾನ್) ಆಗಿ ಆಯ್ಕೆ ಮಾಡಲಾಯಿತು.

ಯಾಹ್ಯಾ ಸಖಾಫಿ ಆಲಪ್ಪುಝ (ಜನರಲ್ ಕನ್ವಿನರ್) ಮತ್ತು ಅಬ್ದುಲ್ಲಾ ಹಾಜಿ ಉಳುವಾರ್ (ಫೈನಾನ್ಸ್ ಕನ್ವಿನರ್) ಆಗಿ ನೇಮಕ ಮಾಡಲಾಯಿತು. ಜೊತೆ ಸಹಾಯಕ ಕನ್ವಿನರ್ ಗಳಾಗಿ ಅನೀಶ್ ತಲಶೇರಿ, ಇಕ್ಬಾಲ್ ಕಾಜೂರ್, ಯೂಸುಫ್ ಉರುವಲ್ಪದವು, ಶಮೀರ್ ಪಿ.ಟಿ., ಅಶ್ರಫ್ ಪಾಲಕ್ಕಾಡ್ ಆಯ್ಕೆಗೊಂಡರು.

ವಿವಿಧ ಉಪಸಮಿತಿ ಪದಾಧಿಕಾರಿಗಳಾಗಿ ಸಲಾಮ್ ಸಖಾಫಿ ಎರಂಜಿಮಾವು ಮತ್ತು ಅಮೀರ್ ಹಸ್ಸನ್ (ಲೀಗಲ್ ಡಿಪಾರ್ಟ್ಮೆಂಟ್), ಇಸ್ಮಾಯೀಲ್ ಹಾಜಿ ಮಾಟೂರ್ ಮತ್ತು ಹುಸನುಲ್ ಮುಬಾರಕ್ (ಪ್ರಚಾರ ಸಮಿತಿ) ಅಬೂಬಕ್ಕರ್ ಸ-ಆದಿ ಆಳಕ್ಕಾಡ್ ಮತ್ತು ಫೈಸಲ್ ಎದಿರಿತೋಡ್ (ಕಚೇರಿ ನಿರ್ವಹಣಾ ವಿಭಾಗ) ಅಬ್ದುಲ್ ಹಕೀಮ್ ಸ-ಆದಿ ಕಾರಕುನ್ನು ಮತ್ತು ಜಬ್ಬಾರ್ ಮಾಸ್ಟರ್ (ಸುಪ್ಪ್ಲಿಮೆಂಟರಿ) ನಜ್ಮುದ್ದೀನ್ ಪುಡಿಯಂಗಡಿ ಮತ್ತು ಅಶ್ರಫ್ ಮಾಟೂರ್ (ರಿಫ್ರೆಶ್ ಮೆಂಟ್) ಅಝೇಜ್ ಸಖಾಫಿ ಮಂಬಾಡ್, ಉಮರ್ ಸ-ಆದಿ ಕರ್ನೂರ್ (ಪ್ರೋಗ್ರಾಮ್ & ಸ್ಟೇಜ್) ಜಲೀಲ್ ಹಾಜಿ ಗುರುವಾಯೂರ್ ಮತ್ತು ಶಫೀಕ್ ಪುರತ್ತಿಲ್ (ಫೈನಾನ್ಸ್) ಸುಲೈಮಾನ್ ಕಣ್ಮನಮ್, ಷರೀಫ್ ಪೇರಾಲ್ (ಟ್ರಾನ್ಸ್ ಪೋರ್ಟಷನ್) ಉಸ್ಮಾನ್ ಕಕ್ಕಾಡ್, ಹಕೀಮ್ ಅಹ್ಸನಿ( ವಾಲೆಂಟೈಯರ್) ಅಬ್ದುಲ್ ಗಫ್ಫಾರ್ ಸ-ಅದಿ ರಂಡತ್ತಾನಿ, ಅಬೂಬಕರ್ ನದ್ವಿ ಪುಂಜಾವಿ, ಮುನೀರ್ ಸಖಾಫಿ ತುರುತ್ತಿ (ರಿಸೆಪ್ಶನ್) ಇಸ್ಮಾಯೀಲ್ ಕಕ್ಕಾಡ್, ಖಲೀಲ್ ದೇಲಿ(ಐ.ಡಿ) ಆಯ್ಕೆಗೊಂಡರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News