ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್, ಮಂಜನಾಡಿ: ದಮಾಮ್ ವಲಯದ ಮಹಾಸಭೆ

Update: 2018-05-03 09:49 GMT

ದಮಾಮ್, ಮೇ 3: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್, ಮಂಜನಾಡಿ, ದಮಾಮ್ ವಲಯದ ಮಹಾಸಭೆಯು ದಮಾಮ್ ಹೋಟೆಲ್ ಹೊಲಿಡೇಸ್ ನಲ್ಲಿ ಸಭಾಧ್ಯಕ್ಷ ಹಾಜಿ ಇಝುದ್ದೀನ್ ಮುಸ್ಲಿಯಾರ ಅಧ್ಯಕ್ಷತೆಯಲ್ಲಿ ಜರಗಿತು.

ಕೆಸಿಎಫ್ ದಮಾಮ್ ಝೋನ್ ಅಧ್ಯಕ್ಷ ಉಸ್ತಾದ್ ಫಾರೂಕ್ ಕುಪ್ಪೆಟ್ಟಿ ಕಿರಾತ್ ನೊಂದಿಗೆ ಆರಂಭಿಸಿದ ಸಭೆಯನ್ನು ಅಲ್ ಮದೀನಾ ಹಫ್ರ್ ಲ್ ಬಾತಿನ್ ಉಸ್ತಾದ್ ನಜೀಬ್ ಮದನಿ ದುವಾ ನೆರವೇರಿಸಿದರು.

ವಲಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್  ಮಲ್ಲೂರು ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ ಸಮಿತಿಯ ಹಿರಿಯ ಸಲಹೆಗಾರ ಹಾಜಿ ಎನ್ ಎಸ್ ಅಬ್ದುಲ್ಲಾ, ಅಲ್ ಮದೀನಾ ಪ್ರಾರಂಭಿಕ ಹಂತದಿಂದ ನಡೆದು ಬಂದ ದಾರಿಯನ್ನು ವಿವರಿಸಿ, ಉದ್ಘಾಟಿಸಿದರು.

ಮಹಾಸಭೆಯ ವರದಿಯನ್ನು ಸಹ ಕಾರ್ಯದರ್ಶಿ ಅನ್ವರ್ ಪಡುಬಿದ್ರೆ ಜುಬೈಲ್ ಹಾಗು ದ್ವಿ ವಾರ್ಷಿಕ ವರದಿ ಯನ್ನು ಸಹ ಕಾರ್ಯದರ್ಶಿ ಮುಹಮ್ಮದ್  ಮಲೆಬೆಟ್ಟು ಸಭೆಯಲ್ಲಿ ಮಂಡಿಸಿ,  ಅಂಗಿಕರಿಸಲಾಯಿತು.  ದ್ವಿ ವಾರ್ಷಿಕ ಲೆಕ್ಕಪತ್ರ ವನ್ನು ಪ್ರಧಾನ ಕಾರ್ಯಾದರ್ಶಿ ಇಕ್ಬಾಲ್  ಮಲ್ಲೂರು ಮಂಡಿಸಿದರು. ಸಭೆಯಲ್ಲಿ ಕರ್ನಾಟಕ ಸುನ್ನೀ ಜಂ ಇಯ್ಯತುಲ್ ಉಲಾಮಾದ ಅಧ್ಯಕ್ಷ, ಖಾಝಿ ಬೇಕಲ್ ಉಸ್ತಾದರನ್ನು ಅಲ್ ಮದೀನಾ ವಲಯ ಸಮಿತಿ ಮುಖಂಡರು  ಸನ್ಮಾನಿಸಿದರು. ನಂತರ  ಬೇಕಲ್ ಉಸ್ತಾದರು ವಲಯ ಸಮಿತಿ ಅಧೀನದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ  ಘಟಕಗಳಾದ  ಪ್ರಥಮ ದಮಾಮ್ ಘಟಕ, ದ್ವಿತೀಯ ಜುಬೈಲ್ ಘಟಕ ಹಾಗು ತೃತೀಯ ಘಟಕ ಹಫ್ರ್ಲ್ ಬಾತಿನ್ ಘಟಕಗಳಿಗೆ ಪ್ರಶಸ್ಸಂನೀಯ ಸ್ಮರಣಿಕೆಗಳನ್ನು  ವಿತರಿಸಿದರು. ನಂತರ ಘಟಕಗಳ ಪ್ರತಿನಿಧಿಗಳಿಂದ ಅಬಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ದಮಾಮ್ ನಿಂದ ಅಧ್ಯಕ್ಸ ಕಾಸೀಮ್ ಅಡ್ಡುರು, ಜುಬೈಲ್ ನಿಂದ ಕೋಶಾಧಿಕಾರಿ ಉಸ್ಮಾನ್ ಝುಹ್ರಿ , ಅಲ್  ಕೊಬಾರ್ ನಿಂದ ಕೋಶಾಧಿಕಾರಿ  ಅಬ್ದುಲ್ ರಝಕ್ ಸಖಾಫಿ, ಅಲ್ ಹಸ್ಸಾದಿಂದ ಪ್ರ  ಕಾರ್ಯದರ್ಶಿ ಹುಸೈನ್ ಮಂಜನಾಡಿ ಹಾಗೂ ಹಫ್ರುಲ್ ಬಾತಿನ್ ನಿಂದ ಪ್ರ ಕಾರ್ಯದರ್ಶಿ ಅಬ್ದುಲ್ ಕರೀಮ್  ರವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ನೂತನ ಸಮಿತಿ ರಚಿಸಲಾಯಿತು: ಗೌರವಾಧ್ಯಕ್ಷರಾಗಿ ಇಝುದ್ದೀನ್ ಮುಸ್ಲಿಯಾರ್, ಅಧ್ಯಕ್ಷರಾಗಿ ಹಾಜಿ N S ಅಬ್ದುಲ್ಲಾ ಮಂಜನಾಡಿ, ಉಪಾಧ್ಯಕ್ಷರಾಗಿ ಟಿ.ಎಚ್. ಬಶೀರ್ ತೋಟಾಲ್ , ಉಸ್ಮಾನ್ ಝುಹ್ರಿ, ಕಿನ್ಯ, ಬಾಬಾ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಜಿ. ಇಕ್ಬಾಲ್ ಮಲ್ಲೂರು, ಸಹ ಕಾರ್ಯದರ್ಶಿಗಳಾಗಿ ರಶೀದ್ ವಳವೂರು , ಇಸ್ಮಾಯಿಲ್ ಪೊಯ್ಯಲ್ , ಕೋಶಾಧಿಕಾರಿಯಾಗಿ ಮೂಸಾ ಹಾಜಿ ಕಿನ್ಯ, ಸಲಹೆಗಾರರಾಗಿ ಇಬ್ರಾಹಿಂ ಬಂಟವಾಲ್ , ಮೊಯ್ದಿನ್ ಹಾಜಿ ಉರುಮನೆ, ಸಂಘಟನಾ ಕಾರ್ಯದರ್ಶಿಯಾಗಿ ಮಹಮ್ಮದ್ ಮಲೆ ಬೆಟ್ಟು, ಅಬ್ದುಲ್ ರಹೀಮ್ ಉಚ್ಚಿಲ, ಲೆಕ್ಕ ಪರಿಶೋಧಕರಾಗಿ : ಫಾರೂಕ್ ಕಾಟಿಪಳ್ಳ ಹಾಗೂ 17 ಮಂದಿ  ಕಾರ್ಯಕಾರಿ ಸದಸ್ಯರನ್ನು ಆರಿಸಲಾಲಾಯಿತು. ಹಾಗೂ 2019 ರಲ್ಲಿ ನಡೆಯುವ ಅಲ್ ಮದೀನಾ ಸಿಲ್ವರ್ ಜುಬಿಲಿ ಪ್ರಚಾರ ಸಮಿತಿಯನ್ನು ಆಯ್ಕೆಮಾಡಲಾಯಿತು.

ಸಭೆಯಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಿತು. ವೇದಿಕೆಯಲ್ಲಿ ವಲಯ ಗೌರವಾಧ್ಯಕ್ಷ ಬಷೀರ್ ತೋಟಾಲ್, ವಲಯ ಕೋಶಾಧಿಕಾರಿ ಇಸ್ಮಾಯಿಲ್ ಪೊಯ್ಯಲ್, ಜುಬೈಲ್ ಘಟಕ ಅಧ್ಯಕ್ಷ ಮೂಸಾ ಹಾಜಿ, ಅಲ್  ಮದೀನಾ ಹಫ್ರ್ಲ್ ಬಾತಿನ್ ಮುಂದಾಳು ಬಾಬ ಮಂಜೇಶ್ವರ,  ಕೆಸಿಎಫ್ ರಾಷ್ಟ್ರೀಯ ಪ್ರ  ಕಾರ್ಯದರ್ಶಿ, ಫಾರೂಕು ಕಾಟಿಪಳ್ಳ ಉಪಸ್ಥಿತರಿದ್ದರು. ರಿಸೀವರ್ ಹೈದರ್ ನಯೀಮಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News