ವೇಗ ಕಡಿಮೆ ಮಾಡಲು ಬಸ್ ಚಾಲಕರಿಗೆ ಆಟಿಕೆ ಪಿಸ್ತೂಲು ಹಿಡಿದ ಭಾರತೀಯ

Update: 2018-05-03 17:22 GMT

ದುಬೈ, ಮೇ 3: ದುಬೈಯಲ್ಲಿ ‘ವೇಗವಾಗಿ ಚಲಿಸುವ’ ಬಸ್ ಚಾಲಕರನ್ನು ಬೆದರಿಸಲು ಭಾರತೀಯನೊಬ್ಬನು ಆಟಿಕೆ ಬಂದೂಕನ್ನು ಬಳಸಿದ್ದಾನೆ ಎಂದು ದುಬೈ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಬಸ್ಸುಗಳ ವೇಗವನ್ನು ಕಡಿಮೆ ಮಾಡುವಂತೆ ಚಾಲಕರಿಗೆ ಸೂಚಿಸುವುದಕ್ಕಾಗಿ ತಾನು ತನ್ನ ಮಗಳ ಆಟಿಕೆ ಪಿಸ್ತೂಲನ್ನು ಬಳಸಿರುವುದಾಗಿ ದುಬೈಯಲ್ಲಿ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿರುವ 35 ವರ್ಷದ ದುಬೈ ನಿವಾಸಿ ಪೊಲೀಸರಿಗೆ ಹೇಳಿದ್ದಾನೆ. ‘‘ರಸ್ತೆಯಲ್ಲಿ ಓಡಾಡುವ ನನ್ನ ಹಾಗೂ ನನ್ನಂಥ ಇತರ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ಉಂಟಾದ ಹಿನ್ನೆಲೆಯಲ್ಲಿ ನಾನು ಹೀಗೆ ಮಾಡಿದೆ’’ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ ಎಂದು ‘ಖಲೀಜ್ ಟೈಮ್ಸ್’ ಬುಧವಾರ ವರದಿ ಮಾಡಿದೆ.

ಆತನ ವಿರುದ್ಧ ಕ್ರಿಮಿನಲ್ ಬೆದರಿಕೆ ಹಾಕಿದ ಪ್ರಕರಣವನ್ನು ದಾಖಲಿಸಲಾಗಿದೆ.

ಆತ ಪಿಸ್ತೂಲಿನೊಂದಿಗೆ ಮೂರು ಬಸ್ಸುಗಳ ಚಾಲಕರ ಬಳಿ ಹೋಗಿ ಬಸ್‌ಗಳ ಕಿಟಕಿ ಬಡಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News