ದುಬೈ ಲಾಟರಿ: ಭಾರತೀಯನಿಗೆ 12.70 ಕೋಟಿ ರೂ.

Update: 2018-05-03 17:30 GMT

ದುಬೈ, ಮೇ 3: ದುಬೈನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಅನಿಲ್ ವರ್ಗೀಸ್ ತೇವರಿಲ್ ‘ಬಿಗ್ ಟಿಕೆಟ್ ಅಬುಧಾಬಿ’ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದಿದ್ದಾರೆ.

ಅವರು 7 ಮಿಲಿಯ ದಿರ್ಹಮ್ (ಸುಮಾರು 12.70 ಕೋಟಿ ರೂಪಾಯಿ)ನ ಪ್ರಥಮ ಬಹುಮಾನ ಗೆದ್ದಿದ್ದಾರೆ.

ಅವರು ಎಪ್ರಿಲ್ ತಿಂಗಳ ಡ್ರಾಕ್ಕಾಗಿ ಆನ್‌ಲೈನ್ ಮೂಲಕ ಟಿಕೆಟ್ ಖರೀದಿಸಿದ್ದರು.

ಇದೇ ಡ್ರಾದಲ್ಲಿ ಇತರ ಏಳು ಮಂದಿ ತಲಾ 1 ಲಕ್ಷ ದಿರ್ಹಮ್ (ಸುಮಾರು 18 ಲಕ್ಷ ರೂಪಾಯಿ) ಬಹುಮಾನ ಪಡೆದಿದ್ದಾರೆ. ಈ ಪೈಕಿ ಒರ್ವ ಬಾಂಗ್ಲಾದೇಶಿ ಮತ್ತು ಓರ್ವ ಮೊರೊಕ್ಕನ್ ಹಾಗು ಉಳಿದವರು ಭಾರತೀಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News