ಕೆಸಿಎಫ್ ಓಲ್ಡ್ ಸನಯ್ಯ ಸೆಕ್ಟರ್, ಅಲ್ ಮದೀನ ಮಂಜನಾಡಿ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕೋತ್ಸವ

Update: 2018-05-06 17:33 GMT

ರಿಯಾದ್, ಮೇ 6: ಕೆಸಿಎಫ್ ಓಲ್ಡ್ ಸನಯ್ಯ ಸೆಕ್ಟರ್, ರಿಯಾದ್ ಮತ್ತು ಅಲ್ ಮದೀನ ಯತೀಮ್ ಖಾನಾ ಮಂಜನಾಡಿ ಜಂಟಿ ಆಶ್ರಯದಲ್ಲಿ ಕೆಸಿಎಫ್ ಘಟಕದಲ್ಲಿ ಸ್ವಲಾತ್ ಮಜ್ಲಿಸ್ ಮತ್ತು ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಕೆಸಿಎಫ್ ಓಲ್ಡ್ ಸನಯ್ಯ ಸೆಕ್ಟರ್ ನ ಅಧ್ಯಕ್ಷ ಉಸ್ತಾದ್ ಅಬ್ದುಲ್ ರಹ್ಮಾನ್ ಮದನಿ ಅವರ ಅಧ್ಯಕ್ಷತೆಯಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು. ಸಭೆಯಲ್ಲಿ ಮೂಸ ಹಾಜಿ , ಇಸ್ಮಾಈಲ್ ನೂಜಿ, ಮೊಹಿದೀನ್ ಝುಹರಿ, ಮುಸ್ತಫ ಮಂಜನಾಡಿ, ಓಲ್ಡ್ ಸನಯ್ಯ ಸೆಕ್ಟರ್ ನ ಸದಸ್ಯರು ಮತ್ತು ಅಲ್ ಮದೀನ ಯತೀಮ್ ಖಾನ ಮಂಜನಾಡಿ ಇದರ ಕೆಲವು ಆಡಳಿತ ವರ್ಗದವರು ಉಪಸ್ಥಿತರಿದ್ದರು.

ಸ್ವಲಾತ್ ಮಜ್ಲಿಸ್ ನಂತರ ಕೆಸಿಎಫ್ ಓಲ್ಡ್ ಸನಯ್ಯ ಸೆಕ್ಟರ್ ಮತ್ತು ಅಲ್ ಮದೀನ ಯತೀಮ್ ಖಾನ ಮಂಜನಾಡಿ ಜಂಟಿ ಆಶ್ರಯದ ವಾರ್ಷಿಕೋತ್ಸವ ನಡೆಯಿತು.  ಮೂಸ ಹಾಜಿ ಖಿರಾಅತ್ ಪಠಿಸಿದರು.  ಉಸ್ತಾದ್ ಮುಸ್ತಫ ಮಂಜನಾಡಿ  ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಮೊಯಿದೀನ್ ಬಾವ, ಹಾಜಿ ಅಬ್ದುಲ್ಲಾಹ್ , ಪೋಡಿ ಹಾಜಿ, ಝೋನಲ್ ವತಿಯಿಂದ ಉಸ್ತಾದ್ ಸಿದ್ದೀಕ್ ಸಖಾಫಿ ಪೆರುವಾಯಿ, ಟ್ರೆಶರರ್ ಇಸ್ಮಾಈಲ್ ಕಣ್ಣಂಗಾರ್, ಓಲ್ಡ್ ಸನಯ್ಯ ಸೆಕ್ಟರ್  ಕಾರ್ಯದರ್ಶಿ ಇಸ್ಮಾಈಲ್ ನೂಜಿ,  ಟ್ರೆಶರರ್ ಮೊಇದೀನ್ ಝುಹುರಿ ಉಸ್ತಾದ್ ಮತ್ತು ಸೆಕ್ಟರ್ ನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಕೆಸಿಎಫ್ ಓಲ್ಡ್ ಸನಯ್ಯ ಸೆಕ್ಟರ್ ನ ಅಧ್ಯಕ್ಷ ಉಸ್ತಾದ್ ಅಬ್ದುಲ್ ರಹ್ಮಾನ್ ಮದನಿ ಮಾತನಾಡುತ್ತಾ ಅಲ್ ಮದೀನ ಯತೀಮ್ ಖಾನ ಮಂಜನಾಡಿಯ ಬಗ್ಗೆ ವಿವರಿಸಿದರು. ಸುಮಾರು ಹದಿನೈದು ವರ್ಷಗಳ ಹಿಂದಿನಿಂದಲೇ ಈ ಸಂಸ್ಥೆಯ ಒಂದು ಅಂಗವಾಗಿ ಇದರ  ಅಭಿವೃದ್ದಿಗಾಗಿ ಬಹಳಷ್ಟು ಶ್ರಮ ವಹಿಸಿದ್ದು, ಅದನ್ನು ಈಗಲೂ ಮುನ್ನಡೆಸುತ್ತಾ ಹೊಸ ಯೋಜನೆಗಳನ್ನು  ಮಾಡುವ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಸೆಕ್ಟರ್ ಕಾರ್ಯದರ್ಶಿ ಇಸ್ಮಾಈಲ್ ನೂಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News