ದುಬೈ: ಬ್ಲಡ್‌ ಡೋನರ್ಸ್ ಮಂಗಳೂರು, ಬದ್ರಿಯಾ ಪ್ರೆಂಡ್ಸ್ ದುಬೈ ವತಿಯಿಂದ ರಕ್ತದಾನ ಶಿಬಿರ

Update: 2018-05-12 16:34 GMT

ದುಬೈ, ಮೇ 12: ಬ್ಲಡ್‌ ಡೋನರ್ಸ್ ಮಂಗಳೂರು, ಬದ್ರಿಯಾ ಪ್ರೆಂಡ್ಸ್ ದುಬೈ ವತಿಯಿಂದ ಶುಕ್ರವಾರ ದುಬೈನಲ್ಲಿ ರಕ್ತದಾನದ ಶಿಬಿರ ನಡೆಯಿತು.

ಸುಮಾರು 115 ಅನಿವಾಸಿಗಳು ರಕ್ತದಾನ ಮಾಡುವ ಮೂಲಕ ಹಾಗೂ ವಿಶೇಷವಾಗಿ 4 ಜನ ಪ್ಲಾಟೆಲೆಟ್  ರಕ್ತವನ್ನು ನೀಡಿ, ಪ್ರವಾಸಿಗಳಾದರು ರಕ್ತದಾನ ದಾನ ಮಾಡಲು ಸದಾ ಸಿದ್ಧ ಎಂದು ರಕ್ತದಾನ ಮಾಡಿದ ಯುವಕರು ಈ ಸಂದರ್ಭ ತಿಳಿಸಿದರು.

ಬಿಸಿಎಫ್ ಉಪಾಧ್ಯಕ್ಷ  ಅಬ್ದುಲ್ ಲತೀಫ್ ಮುಲ್ಕಿ, ಕಾರ್ಯದರ್ಶಿ ಡಾ. ಕೌಫ್, ಸಮಾಜ ಸೇವಕ  ನವಾಝ್ ಕೋಟೆಕಾರ್, ಸಮಾಜ ಸೇವಕ ರಫೀಕ್ ಮುಲ್ಕಿ ಹಾಗೂ  ಶಹನವಾಝ್ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.

 ಶಿಬಿರದ ಉಸ್ತುವಾರಿಯನ್ನು ವಹಿಸಿದ ಬ್ಲಡ್ ಡೋನರ್ಸ್ ಮಂಗಳೂರು ಇದರ ಎಡ್ಮಿನ್ ಗಳಾದ ನಝೀರ್ ಬಿಕರ್ನಕಟ್ಟೆ ಮತ್ತು ಸಂಶುದ್ದೀನ್ ಪಿಳಿಗೂಡು ಹಾಗೂ ಬದ್ರಿಯಾ ಪ್ರೆಂಡ್ಸ್ ದುಬೈ ಇದರ ಅಧ್ಯಕ್ಷ ಅಬ್ದುಲ್ ರಹಿಮಾನ್ ಪೊಯ್ಯಾಲ್ ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಹಾಗೂ ಇದರ ಯಶಸ್ವಿಗಾಗಿ ಕೆಲವು ದಿನಗಳಿಂದ ದುಡಿಯುತ್ತಿದ್ದವರಿಗೆ, ಬದ್ರಿಯಾ ಫ್ರೆಂಡ್ಸ್ ಇದರ ಎಲ್ಲಾ ಸದಸ್ಯರಿಗೂ, ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೂ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News