ಸೌದಿ: 85,000 ವರ್ಷಗಳ ಹಿಂದಿನ ಮಾನವ ಹೆಜ್ಜೆ ಗುರುತು ಪತ್ತೆ

Update: 2018-05-12 17:50 GMT

ಜಿದ್ದಾ, ಮೇ 12: 85,000 ವರ್ಷಗಳ ಹಿಂದಿನ ಮಾನವ ಹೆಜ್ಜೆ ಗುರುತುಗಳನ್ನು ಸೌದಿ ಅರೇಬಿಯದ ತಬುಕ್ ಪ್ರಾಂತದಲ್ಲಿ ಪತ್ತೆಹಚ್ಚಲಾಗಿದೆ. ಸೌದಿ ಅರೇಬಿಯದ ಅಲ್-ನಫುದ್ ಮರುಭೂಮಿಯಲ್ಲಿನ ಪ್ರಾಚೀನ ಸರೋವರವೊಂದರ ದಂಡೆಯಲ್ಲಿ ಮಾನವ ಹೆಜ್ಜೆಗಳನ್ನು ಗುರುತಿಸಲಾಗಿದೆ.

ಇತಿಹಾಸಪೂರ್ವ ಕಾಲದ ವಯಸ್ಕ ವ್ಯಕ್ತಿಗಳ ಹೆಜ್ಜೆಗುರುತುಗಳನ್ನು ಪ್ರಾಚೀನ ಸರೋವರದ ದಂಡೆಯಲ್ಲಿ ಪುರಾತತ್ವ ಶಾಸ್ತ್ರಜ್ಞರ ತಂಡವೊಂದು ಪತ್ತೆಹಚ್ಚಿದೆ ಎಂದು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ಅಧ್ಯಕ್ಷ ರಾಜಕುಮಾರ ಸುಲ್ತಾನ್ ಬಿನ್ ಸಲ್ಮಾನ್ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News