ಅಮೆರಿಕ, ಯುಎಇ ವಿಮಾನ ಸಂಸ್ಥೆಗಳ ಜಗಳ ಪರಿಹಾರಕ್ಕೆ ಒಪ್ಪಂದ

Update: 2018-05-12 18:06 GMT

ದುಬೈ, ಮೇ 12: ಅಮೆರಿಕ ಮತ್ತು ಯುಎಇ ವಿಮಾನಯಾನ ಸಂಸ್ಥೆಗಳ ನಡುವಿನ ಜಗಳವನ್ನು ಪರಿಹರಿಸಲು ಅಮೆರಿಕ ಮತ್ತು ಯುಎಇ ಸರಕಾರಗಳು ಒಪ್ಪಿಕೊಂಡಿರುವುದನ್ನು ಎಮಿರೇಟ್ಸ್ ಏರ್‌ಲೈನ್ಸ್ ಶನಿವಾರ ಸ್ವಾಗತಿಸಿದೆ.

ಯುಎಇಯ ವಿಮಾನಯಾನ ಸಂಸ್ಥೆಗಳಿಗೆ ಯುಎಇ ಸರಕಾರ ಅನುಚಿತ ಸಬ್ಸಿಡಿಗಳನ್ನು ನೀಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಉಭಯ ದೇಶಗಳ ವಿಮನಯಾನ ಸಂಸ್ಥೆಗಳ ನಡುವೆ ಹುಟ್ಟಿಕೊಂಡಿರುವ ಜಗಳವನ್ನು ಕೊನೆಗೊಳಿಸಲು ಉಭಯ ದೇಶಗಳ ಅಧಿಕಾರಿಗಳು ಶುಕ್ರವಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ ಬಳಿಕ ಎಮಿರೇಟ್ಸ್ ಏರ್‌ಲೈನ್ಸ್ ಈ ಹೇಳಿಕೆ ನೀಡಿದೆ.

ಈ ಕುರಿತ ಒಪ್ಪಂದಕ್ಕೆ ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಖಾಸಗಿಯಾಗಿ ಸಹಿ ಹಾಕಲಾಯಿತು ಎಂದು ಅಸೋಸಿಯೇಟಡ್ ಪ್ರೆಸ್ ವರದಿ ಮಾಡಿದೆ.

ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಮನೀಶಾ ಸಿಂಗ್ ಮತ್ತು ಅಮೆರಿಕಕ್ಕೆ ಎಮಿರಾಟಿ ರಾಯಭಾರಿ ಯೂಸುಫ್ ಅಲ್ ಒಟೈಬ ಸಹಿ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News