ಕೆಸಿಎಫ್ ದುಬೈ ಸೌತ್ ಝೋನ್ ಸಮಿತಿಯ ವಾರ್ಷಿಕ ಮಹಾಸಭೆ

Update: 2018-05-16 12:18 GMT

ದುಬೈ,ಮೇ.16: ಅನಿವಾಸಿ ಸುನ್ನೀ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ದುಬೈ ಸೌತ್ ಝೋನ್ ಸಮಿತಿಯ ವಾರ್ಷಿಕ ಮಹಾಸಭೆಯು ಮೇ 11 ಶುಕ್ರವಾರ ಕೆಸಿಎಫ್ ದುಬೈ ಸೌತ್ ಝೋನ್ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಝೋನ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ವಹಿಸಿದ್ದರು. ಝೋನ್ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷರಾಗಿದ್ದ ಶಾಹುಲ್ ಹಮೀದ್ ಸಖಾಫಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯನ್ನು ಮೊಹಮ್ಮದ್ ಅಲಿ ಫೈಝಿಯವರು ಉದ್ಘಾಟಿಸಿದರು.

ಈ ಮಹಾ ಸಭೆಯಲ್ಲಿ ಹಿಂದಿನ ಒಂದು ವರ್ಷದ ಝೋನ್ ಸಮಿತಿಯ ಎಲ್ಲಾ ವಿಭಾಗದ ಸಂಪೂರ್ಣ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಶಿಕ್ಷಣ ವಿಭಾಗದ ವರದಿಯನ್ನು ಶಾಹುಲ್ ಹಮೀದ್ ಸಖಾಫಿ, ಸಂಘಟನಾ ವಿಭಾಗದ ವರದಿಯನ್ನು ಅಬ್ದುಲ್ ರಹಿಮಾನ್ ಉಳ್ಳಾಲ, ವೆಲ್ಫೇರ್ ವಿಭಾಗದ ವರದಿ ಶರೀಫ್ ಬೈರಿಕಟ್ಟೆ, ಪಬ್ಲಿಕೇಷನ್ ವಿಭಾಗದ ವರದಿ ಮುಹಮ್ಮದ್ ಅಲಿ‌ ಕನ್ಯಾನ, ಕಚೇರಿ ನಿರ್ವಹಣೆ ವಿಭಾಗದ ವರದಿಯನ್ನು ಜಮಾಲ್ ಸುಳ್ಯ ಹಾಗೂ ಝೋನ್ ಸಮಿತಿಯ ಸಂಪೂರ್ಣವಾದ ವರದಿಯನ್ನು ಝೋನ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಕಲ್ಲಡ್ಕರವರು ಮಂಡಿಸಿದರು.

ಇದೇ ಸಂದರ್ಭದಲ್ಲಿ ಸಮಿತಿಯ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿದ ಯುಎಇ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಹಮೀದ್ ಸಅದಿಯವರು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸಂಘಟನಾ ತರಗತಿಯನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿಕೊಟ್ಟರು. ಯುಎಇ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಕಾಜೂರು ಡಿವಿಷನ್ ವಿಭಾಗದಲ್ಲಿನ ಬದಲಾವಣೆಯ ಕುರಿತು ವಿವರಿಸಿದರು. ನಂತರ ಯುಎಇ ರಾಷ್ಟ್ರೀಯ ಸಮಿತಿಯ ಸಂಘಟನಾ ಕನ್ವೀನರ್ ಕೆ.ಎಚ್ ಮೊಹಮ್ಮದ್ ಸಖಾಫಿಯು ಸಂಘಟನೆಯ ಮುಂದಿನ ಯೋಜನೆಗಳ ಕುರಿತು ಕಾರ್ಯಕರ್ತರ ನಡುವೆ ಚರ್ಚೆ ಹಾಗೂ ಕಾರ್ಯಕರ್ತರಿಂದ ಮುಂದಿನ ಕಾರ್ಯಚಟುವಟಿಕೆಗಳಲ್ಲಿನ ಬದಲಾವಣೆಗಳ ಕುರಿತಾಗಿ ಸಲಹೆಗಳನ್ನು ಕೇಳಿ ಪಡೆದುಕೊಂಡರು.

ಸಭೆಯಲ್ಲಿ ರಾಷ್ಟ್ರೀಯ ನಾಯಕರಾದ ನಝೀರ್ ಹಾಜಿ ಕೆಮ್ಮಾರ ಹಾಗೂ ಅಬ್ದುಲ್ ಶುಕೂರ್ ಮಾಣಿಲ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೆಸಿಎಫ್ ದುಬೈ ಸೌತ್ ಝೋನ್ 2018 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿ: ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಅಹ್ಸನಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ನಝೀರ್ ಹಾಜಿ ಕೆಮ್ಮಾರ ಆಯ್ಕೆಯಾದರು. ನೋಲೆಜ್ ವಿಭಾಗದ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಸಖಾಫಿ, ಕನ್ವೀನರ್ ಆಗಿ ಇಮ್ತಿಯಾಝ್ ಬೈರಿಕಟ್ಟೆ ನೇಮಕಗೊಂಡರು. 

ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಅಹ್ಮದ್ ಶರೀಫ್ ಹೊಸ್ಮಾರ್,ಕನ್ವೀನರ್ ಆಗಿ ಅಬ್ದುಲ್ ರಹ್ಮಾನ್ ಉಳ್ಳಾಲ ಆಯ್ಕೆಯಾದರು.

ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಶರೀಫ್ ಬೈರಿಕಟ್ಟೆ, ಕನ್ವೀನರ್ ಆಗಿ ಅಬ್ದುಲ್ ಅಝೀಝ್ ಕೆದಿಲ ಮತ್ತು ಆಡಳಿತ ವಿಭಾಗದ ಅಧ್ಯಕ್ಷರಾಗಿ ಶರೀಫ್ ಪಡೀಲ್, ಕನ್ವೀನರ್ ಆಗಿ ರಿಯಾಝ್ ವೆನೂರ್ ಆಯ್ಕೆಗೊಂಡರು.

ಪಬ್ಲಿಕೇಷನ್ ವಿಭಾಗದ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಕನ್ಯಾನ,  ಕನ್ವೀನರ್ ಆಗಿ ಜಮಾಲ್ ಸುಳ್ಯ ಹಾಗೂ ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಮೊಹಮ್ಮದ್ ಫೈಝಿ ಸುರಿಬೈಲ್, ಕನ್ವೀನರ್ ಆಗಿ ಶರೀಫ್ ದೇರಳಕಟ್ಟೆ ನೇಮಕಗೊಂಡರು.

ಸಭೆಯ ಕೊನೆಯಲ್ಲಿ ಇಲ್ಯಾಸ್ ಮದನಿ ಬರ್ಷ ಉಸ್ತಾದರು ಪ್ರಾರ್ಥಿನೆ ನಡೆಸಿದರು. ಮಹಾ ಸಭೆಗೆ ಆಗಮಿಸಿದ ರಾಷ್ಟ್ರೀಯ ನಾಯಕರನ್ನು ಅಹ್ಮದ್ ಶರೀಪ್ ಹೊಸ್ಮಾರ್ ಸ್ವಾಗತಿಸಿದರೆ, ಅಝೀಝ್ ಕೆದಿಲ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News