ಯುಎಇಯಲ್ಲಿ ಕಾರ್ಮಿಕ ಕಾನೂನು ಬದಲು: ಸಚಿವ

Update: 2018-05-24 17:24 GMT

ಅಬುಧಾಬಿ (ಯುಎಇ), ಮೇ 24: ನಾಯಕತ್ವ, ನಾಗರಿಕರು ಮತ್ತು ಖಾಸಗಿ ಕ್ಷೇತ್ರದ ಆಶೋತ್ತರಗಳನ್ನು ಈಡೇರಿಸಲು ಹಾಗೂ ತೈಲೋತ್ತರ ಕಾಲಕ್ಕೆ ಹೊಂದಿಕೊಳ್ಳಲು ಯುಎಇಯ ಕಾರ್ಮಿಕ ಕಾನೂನನ್ನು ಬದಲಾಯಿಸಲಾಗುವುದು ಎಂದು ಮಾನವ ಸಂಪನ್ಮೂಲಗಳು ಮತ್ತು ಎಮಿರೇಟೀಕರಣ ಸಚಿವ ನಾಸಿರ್ ಬಿನ್ ಥಾನಿ ಅಲ್ ಹಮೇಲಿ ಮಂಗಳವಾರ ಫೆಡರಲ್ ನ್ಯಾಶನಲ್ ಕೌನ್ಸಿಲ್‌ಗೆ ಹೇಳಿದ್ದಾರೆ.

ಮಾನವ ಸಂಪನ್ಮೂಲ ನೀತಿಯ ಬಗ್ಗೆ ನಡೆದ ಚರ್ಚೆಯಲ್ಲಿ ಸಚಿವರು ಈ ಮಾಹಿತಿ ನೀಡಿದರು. ಆದರೆ, ನೂತನ ಕಾನೂನನ್ನು ಯಾವಾಗ ಜಾರಿಗೆ ತರಲಾಗುವುದು ಎಂಬ ಬಗ್ಗೆ ವಿವರಗಳನ್ನು ನೀಡಲಿಲ್ಲ.

ರಾಷ್ಟ್ರೀಯ ಕಾರ್ಯಸೂಚಿಯ ಗುರಿಗಳನ್ನು ಸಾಧಿಸುವುದು ನೂತನ ಕಾನೂನಿನ ಉದ್ದೇಶವಾಗಿದೆ ಎಂದು ಹೇಳಿದ ಅವರು, 5 ಶೇಕಡ ನಾಗರಿಕರಿಗೆ ಖಾಸಗಿ ಕ್ಷೇತ್ರಗಳ ಉದ್ಯೋಗಗಳು ಲಭಿಸುವಂತೆ ಖಾತರಿಪಡಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News