ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಮ್‌ನಿಂದ ಇಫ್ತಾರ್ ಕೂಟ

Update: 2018-05-29 03:56 GMT

ಅಬುಧಾಬಿ, ಮೇ 28: ಸಾಮಾಜಿಕ ಕಾರ್ಯಗಳಿಂದ ಪ್ರಸಿದ್ಧವಾಗಿರುವ ಬ್ಯಾರೀಸ್ ವೆಲ್ಪೇರ್ ಫೋರಮ್  ಮೇ 25ರಂದು ಇಲ್ಲಿನ ಇಂಡಿಯ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿತು.

ಈ ಸಹಭೋಜನದಲ್ಲಿ ಹಲವು ಕ್ಷೇತ್ರಗಳ ಪ್ರತಿಷ್ಠಿತರ ಜೊತೆಗೆ ಅಬುಧಾಬಿ, ದುಬೈ, ಶಾರ್ಜಾ ಮತ್ತು ಫುಜೈರಾದ ಸುಮಾರು 700 ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದರು.

ಎನ್‌ಎಂಸಿ ಆರೋಗ್ಯ ಸೇವೆ ಸಮೂಹದ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ, ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ರಾಜಮುರುಗಾ, ಐಎಸ್‌ಸಿ ಅಧ್ಯಕ್ಷ ರಮೇಶ್ ಪಣಿಕ್ಕರ್, ಐಎಸ್‌ಸಿ ಉಪಾಧ್ಯಕ್ಷ ಜಯರಾಮ್ ರೈ, ಸಾಹೆಬಾನ್ ಅಬುಧಾಬಿಯ ಫಕ್ರುದ್ದೀನ್ ಭಟ್, ಅದಿಯ, ಆಸಿಫ್ ಬಾಯ್, ಅಕ್ರಮ್ ಬಾಯ್, ಅಲ್ತಾಫ್ ಬಾಯ್, ಸುಹೈಲ್ ಕುದ್ರೋಳಿ, ಅಲ್ತಾಫ್ ಅಹ್ಮದ್, ಸಲೀಂ ಬೈಜಿ, ರಫೀಕ್ ಅಹ್ಮದ್, ಎನ್‌ಎಂಸಿಯ ರವಿ ರೈ, ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲರಾದ ಸಲವುದ್ದೀನ್ ಸರ್, ಅಬುಧಾಬಿ ಕರ್ನಾಟಕ ಸಂಘದ ಸುಂದರ್ ಶೆಟ್ಟಿ, ನ್ಯಾಶನಲ್ ಪತ್ರಿಕೆಯ ತುಪೈಲ್ ಮುಹಮ್ಮದ್, ಕೆಎನ್‌ಆರ್‌ಐ ಫೋರಮ್‌ನ ನೋಯೆಲ್ ಮತ್ತು ಕೆಐಸಿಯ ಹನೀಫ್ ಅರಿಮೂಲೆ ಹಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ರಫೀಕ್ ಕೃಷ್ಣಾಪುರ ಕಾರ್ಯಕ್ರಮವನ್ನು ಆರಂಭಿಸಿ, ನಿರೂಪಿಸಿದರು. ಮೊಯ್ದಿನ್ ಹಂಝಲ್ ಕುರ್ ಆನ್ ಪಠಣ ಮಾಡುವ ಮತ್ತು ವಿ.ಕೆ. ರಶೀದ್ ಅದನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ವಾಗ್ಮಿ ಮೌಲವಿ ಸಹೀರ್ ಹುದವಿ ಅವರು ಉರ್ದುವಿನಲ್ಲಿ ಧಾರ್ಮಿಕ ಭಾಷಣ ಮಾಡಿದರು. ಉಪವಾಸ ಅಂತ್ಯಗೊಳಿಸಿ ಸಂಜೆ ಪ್ರಾರ್ಥನೆಯ ನಂತರ ಕಾರ್ಯಕ್ರಮ ನಡೆಯಿತು. ಉಪಸ್ಥಿತರಿದ್ದ ಗಣ್ಯರು ರಮಝಾನ್ ಶುಭಾಶಯಗಳನ್ನು ಪರಸ್ಪರರಿಗೆ ತಿಳಿಸಿದರು. ಗಣ್ಯರು ಮತ್ತು ಸಮುದಾಯದ ಸದಸ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ತಮ್ಮ ಆಹ್ವಾನವನ್ನು ಸ್ವೀಕರಿಸಿ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಈ ವೇಳೆ ಮಂಗಳೂರಿನಲ್ಲಿ ಬಿಡಬ್ಲ್ಯೂಎಫ್ ನಡೆಸಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಉಚ್ಚಿಲ್ ಮಾಹಿತಿ ನೀಡಿದರು.

ಇಫ್ತಾರ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಬಿಡಬ್ಲ್ಯೂಎಫ್ನ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅವರು ಧನ್ಯವಾದ ತಿಳಿಸಿದರು. ಮಂಗಳೂರಿನಲ್ಲಿ ಸಂಸ್ಥೆಯ ವತಿಯಿಂದ ನಡೆದ 102 ಬಡ ಹೆಣ್ಮಕ್ಕಳ ಸಾಮೂಹಿಕ ವಿವಾಹ ಹಾಗೂ ಇತರ ಸಾಮಾಜಿಕ ಕಾರ್ಯಗಳ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಮಾಹಿತಿ ನೀಡಿದರು. ಈ ಕಾರ್ಯಕ್ಕಾಗಿ ದೇಣಿಗೆ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು ಮುಂದೆಯೂ ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಸಂಸ್ಥೆಯ ಕಾರ್ಯಗಳಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.

ಇದೇ ವೇಳೆ ಡಾ. ಬಿ.ಆರ್ ಶೆಟ್ಟಿ ನೆರೆದವರಿಗೆ ರಮಝಾನ್ ಶುಭಾಶಯ ತಿಳಿಸಿದರು ಮತ್ತು ಬಿಡಬ್ಲ್ಯೂಎಫ್ನ ಕಾರ್ಯವೈಖರಿ ಹಾಗೂ ದೊಡ್ಡ ಮಟ್ಟದಲ್ಲಿ ಇಫ್ತಾರ್ ಕೂಟ ಆಯೋಜಿಸಿ ಅದನ್ನು ಯಶಸ್ವಿಗೊಳಿಸಿದ ರೀತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಬಿಡಬ್ಲ್ಯೂಎಫ್ನ ಸಹಸಂಯೋಜಕ ಸಿದ್ದಿಕ್ ಉಚ್ಚಿಲ್ ಧನ್ಯವಾದ ಸಮರ್ಪಿಸಿದರು.

ಈ ಕಾರ್ಯಕ್ರಮವನ್ನು ಬಿಡಬ್ಲ್ಯೂಎಫ್ನ ಸಂಯೋಜಕ ಇಮ್ರಾನ್ ಅಹಮದ್, ಬಿಡಬ್ಲ್ಯೂಎಫ್ನ ಕಾಪು ಖಜಾಂಚಿ ಮುಹಮ್ಮದ್ ಸಿದ್ದಿಕ್, ಅಬ್ದುಲ್ ಮಜೀದ್ ಎ, ಜಿ. ಮುಹಮ್ಮದ್ ಕಲ್ಲಾಪು, ಬಿಡಬ್ಲ್ಯೂಎಫ್ ಉಪಾಧ್ಯಕ್ಷ ಅಬ್ದುಲ್ ರವೂಪ್, ಬಿಡಬ್ಲ್ಯೂಎಫ್ ಸಲಹೆಗಾರ ಬಶೀರ್ ಬಜ್ಪೆ ಮತ್ತು ಜಲೀಲ್ ಗುರುಪುರ ಜೊತೆಯಾಗಿ ಸಂಯೋಜಿಸಿದ್ದಾರೆ. ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಹಮೀದ್ ಗುರುಪುರ, ಹಂಝ ಖಾದರ್ ಹಾಗೂ ಮುಜೀಬ್ ಉಚ್ಚಿಲ್ ವೃತ್ತಿಪರ ರೀತಿಯಲ್ಲಿ ವ್ಯವಸ್ಥಾಪನೆಗೊಳಿಸಿದ್ದರು.

ನವಾಝ್ ಉಚ್ಚಿಲ್, ಹನೀಫ್ ಉಳ್ಳಾಲ್, ಮೊಯ್ದಿನ್ ಹಂಡೇಲು, ಮಜೀದ್ ಅತ್ತೂರು, ಇರ್ಫಾನ್ ಅಹಮದ್, ರಶೀದ್ ಬಿಜೈ, ರಶೀದ್ ವಿ.ಕೆ, ಅಲ್ತಾಫ್ ತಕ್ರೀರ್, ಬಶೀರ್ ಉಚ್ಚಿಲ್, ಇಮ್ರಾನ್ ಹಾಗೂ ಬಿಡಬ್ಲ್ಯೂಎಫ್ನ ಯುವ ಸ್ವಯಂಸೇವಕರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News