ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ 'ಇಫ್ತಾರ್ ಮೀಟ್ 2018'

Update: 2018-05-29 17:57 GMT

ದುಬೈ, ಮೇ 29: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಫ್) ವತಿಯಿಂದ ಇತ್ತೀಚೆಗೆ ದುಬೈಯ ಊದ್ ಮೆಥದಲ್ಲಿ ಇರುವ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ 'ಬಿಸಿಫ್ ಇಫ್ತಾರ್ ಮೀಟ್ 2018' ನೆರವೇರಿತು.

ಯುಎಇ ಯಲ್ಲಿ ಇರುವ ಅನಿವಾಸಿ ಕನ್ನಡಿಗರು, ಜಾತಿ ಮತ ಭೇದವಿಲ್ಲದೆ ಪಾಲ್ಗೊಂಡ ಈ ಇಫ್ತಾರ್ ಕೂಟದಲ್ಲಿ ಸರಿ ಸುಮಾರು 900 ರಷ್ಟು ಕನ್ನಡಿಗರು ಹಾಜರಿದ್ದರು.  ಮಾಸ್ಟರ್ ಫವಾಝ್  ಕಿರಾಅತ್ ಪಠಿಸಿದರು. ಇಬ್ರಾಹಿಮ್ ದುಬಾಲ್  ನೇತೃತ್ವದಲ್ಲಿ ಇಸ್ಲಾಮಿಕ್ ಕ್ವಿಝ್ ನಡೆಯಿತು. ನಂತರ ಕಿರಾಅತ್ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ. ಬಿಕೆ ಯೂಸುಫ್, ಡಾ. ಕಾಪು ಮುಹಮದ್,  ಎಂ.ಈ. ಮೂಳೂರು ಹಾಗೂ ಅಬ್ದುಲ್ ಲತೀಫ್ ಮುಳ್ಕಯ್ ಬಹುಮಾನ ವಿತರಿಸಿದರು.

ಕೆಸಿಎಫ್ ನಾಯಕ ಉಸ್ತಾದ್ ಮೆಹಬೂಬ್ ಸಖಾಫಿ ಮಾತನಾಡಿ, ಬಿಸಿಎಫ್  ಕಳೆದ 17 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಇಫ್ತಾರ್ ಹಾಗೂ ಸ್ಕಲರ್ಶಿಪ್ ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಡಿಕೆಎಸ್ ಸಿ ಗೌರವಾಧ್ಯಕ್ಷ ಸೈಯದ್ ತಾಹಾ ಬಾಫಖಿ ತಂಙಳ್ ದುಆ ನೆರವೇರಿಸಿದರು.

ಇಫ್ತಾರ್ ನಂತರ ಬಿಸಿಎಫ್ ಅಧ್ಯಕ್ಷ ಡಾ. ಬಿಕೆ ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಸ್ವಾಗತಿಸಿದರು. ಬಿಸಿಎಫ್ ಉಪಾಧ್ಯಕ್ಷ, ಸ್ಕಾಲರ್ಶಿಪ್ ಕಮಿಟಿಯ ಚೆಯರ್ ಮ್ಯಾನ್ ಎಂ ಇ ಮೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ರಿಝ್ವಾನುಲ್ಲ ಖಾನ್, ಅಬ್ದುಲ್ ಜಲೀಲ್ ಉದ್ಯಾವರ, ಶರೀಫ್ ಮುಂಡೂಲ್,  ನೌಫಾಲ್, ಇರಾನಿಯನ್ ಕ್ಲಬ್ ಮ್ಯಾನೇಜರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಡಾ. ಬಿಕೆ ಸಾದಿಕ್, ಉಸ್ತಾದ್ ಮೆಹಬೂಬ್ ಸಖಾಫಿ, ಉಸ್ತಾದ್ ಅಬ್ದುಲ್ಲಾ ಕುಡಿತಮೊಗೆರು, ಅಶ್ರಫ್ ಕೆಎಂ, ಇಕ್ಬಾಲ್ ಕಾಜೂರು,  ಯೂಸುಫ್ ಅರ್ಲಪದವು, ಶುಕೂರ್ ಮನಿಲಾ,  ಜೇಮ್ಸ್ ಮೆಂಡೋನ್ಸಾ, ನಾವೆಲ್ ಅಲ್ಮೇಡಾ, ಇರ್ಷಾದ್ ಮೂಡುಬಿದಿರೆ, ಅಡ್ವೋಕೇಟ್ ಅಬ್ದುಲ್ ಅಝೀಝ್, ಇಕ್ಬಾಲ್ ಕುಂದಾಪುರ, ಮಾಧ್ಯಮದ ಪ್ರತಿನಿಧಿಗಳಾಗಿ ಕಿರಣ್, ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, ಕರ್ನಾಟಕ ಕಲ್ಚರಲ್ ಫೌಂಡೇಶನ್, ಕರ್ನಾಟಕ ಇಸ್ಲಾಮಿಕ್ ಸೆಂಟರ್, ಕರ್ನಾಟಕ ಎನ್ಆರ್ ಐ ಫೋರಮ್, ಕರ್ನಾಟಕ ಸಂಘ ಶಾರ್ಜಾಹ್, ಮಂಗಳೂರು ಕೊಂಕಣ್ಸ್, ಬಿಲ್ಲವ ಸಂಘ, ದುಬೈ ಬಿಲ್ಲವಾಸ್, ಅಲ ಕಮರ್ ಕಲ್ಚರಲ್ ಫೋರಮ್, ಕುಂದಾಪುರ ಅಸೋಸಿಯೇಷನ್ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 

 ಬಿಸಿಫ್ ಉಪಾಧ್ಯಕ್ಷ ಅಮೀರುದ್ದೀನ್ ಮಡಿಕೇರಿ, ಬಿಸಿಎಫ್ ಇಫ್ತಾರ್ ಕಮಿಟಿಯ ವೈಸ್ ಚಯರ್ ಮ್ಯಾನ್ ಹಾಗೂ ಉಪಾಧ್ಯಕ್ಷ  ಅಫೀಕ್ ಹುಸೈನ್, ವಾಲಂಟಿಯರ್ ಉಪಸಮಿತಿಯ ನಾಯಕರಾದ  ಯಾಕೂಬ್,  ಸುಲೈಮಾನ್ ಮೂಳೂರು, ಸಮದ್ ಬೀರಾಲೀ, ಪದಾಧಿಕಾರಿಗಳಾದ  ನವಾಝ್ ಕೋಟೆಕಾರ್, ಸಜಿಪ ಅಬ್ದುಲ್ ರಹ್ಮಾನ್,  ರಫೀಕ್ ಮುಲ್ಕಿ,  ಅಶ್ರಫ್ ಸಟ್ಟಿಕಲ್ ಹಾಗೂ ಬಿಸಿಎಫ್ ಲೇಡೀಸ್ ವಿಂಗ್ ಇದರ ಚಯರ್ ಮ್ಯಾನ್ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಶ್ರಮಿಸಿದ್ದರು. ಅಮೀರುದ್ದೀನ್ ಮಡಿಕೇರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News