ದುಬೈ : ಮೇ 31ರಂದು ನೌಫಲ್ ಸಖಾಫಿ ಕಳಸ ಪ್ರಭಾಷಣ, ಬೇಕಲ ಉಸ್ತಾದ್ ಮುಖ್ಯ ಅತಿಥಿ

Update: 2018-05-30 15:28 GMT

ದುಬೈ, ಮೇ 30: ದುಬೈ ಸರ್ಕಾರದ ವತಿಯಿಂದ ನಡೆಯುವ 22ನೇ ವರ್ಷದ ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್'ಆನ್ ಅವಾರ್ಡ್ ಸಮಿತಿಯ ಈ ವರ್ಷದ ಖುರ್'ಆನ್ ಪ್ರಭಾಷಣ ಕಾರ್ಯಕ್ರಮದಲ್ಲಿ  ಮೇ 31ರಂದು ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ, ಉಡುಪಿ ಜಿಲ್ಲಾ ಸಂಯುಕ್ತ ಖಾಝಿಯೂ ಆಗಿರುವ  ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ರವರು ಆಗಮಿಸಲಿದ್ದು,  ಬಹುಭಾಷಾ ಭಾಷಣಗಾರ, ಕರ್ನಾಟಕ ಕೇರಳ ರಾಜ್ಯಾದಂತ ಪ್ರಭಾಷಣ ವೇದಿಕೆಗಳಲ್ಲಿ ಮಿಂಚುತ್ತಿರುವ ಖ್ಯಾತ ವಾಗ್ಮಿ, ಮೂಡುಬಿದಿರೆ ಝಿಕ್ರಾ ಥಿಯೋಲೋಜಿಕಲ್ ಅಕಾಡೆಮಿ ಸಂಸ್ಥಾಪಕರೂ ಆದ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.  

ದುಬೈ ಜದ್ದಾಫ್ ಲತೀಫಾ ಹಾಸ್ಪಿಟಲ್ ಸಮೀಪದ ಅಲ್ ವಾಸಲ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರಾತ್ರಿ 10 ಘಂಟೆಗೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಆರು ಘಂಟೆಗೆ ಜಲಾಲಿಯ ಮಜ್ಲಿಸ್ ನಡೆಯಲಿದ್ದು ನಂತರ ಇಫ್ತಾರ್, 9 ಘಂಟೆಗೆ ಸಾಮೂಹಿಕ ತರಾವೀಹ್ ನಡೆಯಲಿದೆ.

ದುಬೈ ಸರ್ಕಾರದ ಪ್ರತಿನಿಧಿಗಳು, ಯುಎಇ ಯಲ್ಲಿರುವ ಪ್ರಮುಖ ಉದ್ಯಮಿಗಳು ಹಿರಿಯ ಉಲಮಾಗಳು, ಸಾಮಾಜಿಕ ಸಾಂಘಿಕ ಕ್ಷೇತ್ರದ ನಾಯಕರುಗಳು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ವತಿಯಿಂದ  ಯುಎಇ ಯ ವಿವಿಧ ಕಡೆ ಗಳಿಂದ  ಅಲ್ ವಾಸಲ್ ಸ್ಪೋರ್ಟ್ಸ್ ಕ್ಲಬ್ 'ಗೆ ವಾಹನ ವ್ಯವಸ್ಥೆ ಏರ್ಪಡಿಸಲಾಗಿದ್ದು ಇದರ ಸದುಪಯೋಗ ಪಡಿಸಲು ಪ್ರತಿ ಸೆಕ್ಟರ್ ವ್ಯಾಪ್ತಿಯ ಕೆಸಿಎಫ್ ಕಾರ್ಯಕರ್ತರನ್ನು ಸಂಪರ್ಕಿಸಬಹುದು, ಕಾರ್ಯಕ್ರಮದಲ್ಲಿ  ಭಾಗವಹಿಸಿದವರಲ್ಲಿ ಆಯ್ಕೆಯಾದ ಒಬ್ಬರಿಗೆ ಉಚಿತ ಉಮ್ರಾ ಝಿಯಾರತ್ ಅವಕಾಶ ದೊರೆಯಲಿದೆ.

ಜಾಮಿಯ ಸಅದಿಯ ಇಂಡಿಯನ್ ಸೆಂಟರ್ ದುಬೈ ಅಧೀನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುಎಇ ಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕಾಗಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಹಾಗೂ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News