ದುಬೈಯಲ್ಲಿ ನೂರುಲ್ ಹುದಾ ಯೂತ್ ವಿಂಗ್ ವತಿಯಿಂದ ಇಫ್ತಾರ್ ಸಂಗಮ

Update: 2018-05-30 15:47 GMT

ದುಬೈ, ಮೇ 30: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ಯು.ಎ.ಇ ರಾಷ್ಟ್ರೀಯ ಸಮಿತಿಯ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ನೂರುಲ್ ಹುದಾ ಯೂತ್ ವಿಂಗ್ ಯುಎಇ ಸಮಿತಿಯ ವತಿಯಿಂದ ಕಾರ್ಯಕ್ರಮ ನೂರುಲ್ ಹುದಾ ದಾವತ್-ಇ-ಇಫ್ತಾರ್ 2018 ಕಾರ್ಯಕ್ರಮ ಇತ್ತೀಚೆಗೆ ನಗರದ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವು  ನೂರುಲ್ ಹುದಾ ಯು.ಎ.ಇ ರಾಷ್ಟ್ರೀಯ ಸಮಿತಿಯ ಗೌರವ ಅಧ್ಯಕ್ಷರಾದ ಬಹುಮಾನ್ಯ ಅಸ್ಗರ್ ಅಲೀ ತಂಙಲ್ ಅವರ ದುವಾದೊಂದಿಗೆ ಆರಂಭಗೊಂಡಿತು.

ನೂರುಲ್ ಹುದಾ ಯು.ಎ.ಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶೆರೀಫ್ ಕಾವು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನೂರುಲ್ ಹುದಾ ದುಬೈ ಸಮಿತಿಯ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ನೂರುಲ್ ಹುದಾ ಯುಎಇ ಸಮಿತಿಯ ರಕ್ಷಾಧಿಕಾರಿ ಹಾಗೂ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಅಧ್ಯಕ್ಷ ಹಾಜಿ ಮೊಯಿದೀನ್ ಕುಟ್ಟಿ ದಿಬ್ಬ ಅವರು ಮಾತನಾಡಿ, ಯುವಕರು ಸಮುದಾಯದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಾಗಿ ಮಾಡುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ, ಪುಣ್ಯ ರಮಝಾನ್ ತಿಂಗಳಲ್ಲಿ ಆರಾಧನೆಗಳಿಂದ ಸಂಪನ್ನಗೊಂಡು ಅಲ್ಲಾಹನ ಇಷ್ಟ ದಾಸರಾಗಳು ಪ್ರಯತ್ನಿಸೋಣ ಎಂದು ಹೇಳುತ್ತಾ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಪ್ರಬಾಷಕ ಅಬ್ದುಲ್ ಖಾದರ್ ಅಸ್ಸಅದಿ ಅವರು ಮಾತನಾಡಿದರು.

ನೂರುಲ್ ಹುದಾ ಯೂತ್ ವಿಂಗ್ ಯುಎಇ ಗೌರವಾದ್ಯಕ್ಷ ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ನೂರುಲ್ ಹುದಾ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಲತೀಫ್ ಕೌಡಿಚ್ಚಾರ್ ವಂದಿಸಿದರು.

ವೇದಿಕೆಯಲ್ಲಿ ನೂರುಲ್ ಹುದಾ ಯುಎಇ ಸಮಿತಿಯ ಕೋಶಾಧಿಕಾರಿ  ಅಶ್ರಫ್ ಯಾಕೂತ್ ನೆಕ್ಕರೆ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ದುಬೈ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು,  ನೂರುಲ್ ಹುದಾ ಶಾರ್ಜಾ ರಾಜ್ಯ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಳಿಮುಖ, ನೂರುಲ್ ಹುದಾ ಯೂತ್ ವಿಂಗ್ ಯುಎಇ ಸಮಿತಿಯ ಅಧ್ಯಕ್ಷ ರಝಾಕ್ ಕಾವು ಉಪಸ್ತಿತರಿದ್ದರು.

ಕಾರ್ಯಕ್ರಮದಲ್ಲಿ ನೂರುಲ್ ಹುದಾ ಯು.ಎ.ಇ ಸಮಿತಿ, ದುಬೈ, ಅಬುಧಾಬಿ, ಶಾರ್ಜಾ ರಾಜ್ಯ ಸಮಿತಿ, ಯೂತ್ ವಿಂಗ್ ಪದಾಧಿಕಾರಿಗಳು, ಕ್ಲಸ್ಟರ್ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು ಹಾಗೂ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ, ದಾರುನ್ನೂರ್ ಎಜುಕೇಷನ್ ಸೆಂಟರ್ ಯುಎಇ, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಯುಎಇ ಸಮಿತಿಯ ಪದಾಧಿಕರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News