ಲೈಂಗಿಕ ದೌರ್ಜನ್ಯವನ್ನು ಅಪರಾಧೀಕರಣಗೊಳಿಸಿದ ಸೌದಿ ಅರೇಬಿಯ

Update: 2018-05-30 16:34 GMT

ರಿಯಾದ್, ಮೇ 30: ಸೌದಿ ಅರೇಬಿಯವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಅಪರಾಧೀಕರಣಗೊಳಿಸುವ ಕಾನೂನಿಗೆ ಬುಧವಾರ ಅನುಮೋದನೆ ನೀಡಿದೆ. ಸಂಪುಟಕ್ಕೆ ಸಲಹೆಗಳನ್ನು ನೀಡುವ ಸೌದಿಯ ಶೂರಾ ಮಂಡಳಿ ಸೋಮವಾರದಂದು ಈ ಬಗ್ಗೆ ಕರಡು ಮಸೂದೆಯನ್ನು ಮಂಡಿಸಿತ್ತು. ನೂತನ ಕಾನೂನು ಪ್ರಕಾರ, ಲೈಂಗಿಕ ದೌರ್ಜನ್ಯದ ಅಪರಾಧಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ ಮೂರು ಲಕ್ಷ ರಿಯಲ್ ದಂಡ ವಿಧಿಸಬಹುದಾಗಿದೆ. ಈ ಕಾನೂನಿಗೆ ಸೌದಿ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಈ ಕಾನೂನು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ನಡೆಸುತ್ತಿರುವ ಉದಾರವಾದ ಅಭಿಯಾನದ ಭಾಗವಾಗಿದೆ. ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಈಗಾಗಲೇ ದಶಕಗಳ ಹಿಂದೆ ಸಿನೆಮಾಗಳ ಪ್ರದರ್ಶನದ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದ್ದಾರೆ, ಎರಡೂ ಲಿಂಗದ ಜನರು ಸಮಾರಂಭ ನಡೆಸಲು ಒಪ್ಪಿಗೆ ನೀಡಿದ್ದಾರೆ ಮತ್ತು ಧಾರ್ಮಿಕ ಪೊಲೀಸರ ಅಧಿಕಾರಗಳ ಮೇಲೆ ನಿಯಂತ್ರಣ ಹೇರಿದ್ದಾರೆ.

ಸೌದಿಯಲ್ಲಿ ಮಹಿಳೆಯರು ವಾಹನ ಚಾಲನೆ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಜೂನ್ 24ರಂದು ತೆರವುಗೊಳಿಸಲಾಗುತ್ತಿದೆ. ನೂತನ ಕಾನೂನು ಈ ದಿಸೆಯಲ್ಲಿ ನಡೆಸಿದ ತಯಾರಿಯಾಗಿದೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News